UK Suddi
The news is by your side.

ದೇಶದ ಚರಿತ್ರೆಯನ್ನು ವೈಜ್ಞಾನಿಕವಾಗಿ ಪುನರ್ ರಚಿಸಲು ಶಾಸನಗಳು ಮಹತ್ವದ ಆಕರಗಳಾಗಿವೆ:ಆರ್ ಗೋಪಾಲ್.

ರಾಜ್ಯಮಟ್ಟದ ಶಾಸನಶಾಸ್ತ್ರ ಕಾರ್ಯಗಾರದ ಉದ್ಘಾಟನಾ ಸಮಾರಂಭ
ಧಾರವಾಡ:ನಮ್ಮ ದೇಶದ ಚರಿತ್ರೆಯನ್ನು ವೈಜ್ಞಾನಿಕವಾಗಿ ಪುನರ್ ರಚಿಸಲು ಶಾಸನಗಳು ಮಹತ್ವದ ಆಕರಗಳಾಗಿ ಇರುವುದರಿಂದ ಇವುಗಳನ್ನು ಸಂರಕ್ಷಿಸಲು ಜಾಗೃತಿ ಮೂಡಿಸಲು ಒತ್ತು ನೀಡಬೇಕೆಂದು ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯು ನಿರ್ದೇಶಕರಾದ ಆರ್. ಗೋಪಾಲ ಅವರು ಹೇಳಿದರು.

ಅವರು, ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಶಾಸನಶಾಸ್ತ್ರ ಕುರಿತ ಎರಡು ದಿನಗಳ ಕಾರ್ಯಗಾರದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಸನಗಳ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸುವ ಮುಖಾಂತರ ಇಲಾಖೆಯು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದ, ಕ.ವಿ.ವಿಯ ಕುಲಸಚಿವರಾದ ಡಾ. ಹೊನ್ನು ಸಿದ್ದಾರ್ಥ ಅವರು ಶಾಸನಗಳಲ್ಲಿನ ರಾಜ್ಯಪ್ರಭುತ್ವವನ್ನು ಪ್ರತಿಪಾದಿಸುವ ಮತ್ತು ಸಂಸ್ಕøತಿಯ ಚರಿತ್ರೆಯ ಹೊರತಾಗಿಯೂ ಸಾಮಾಜಿಕ ಮತ್ತು ಜನಪರ ಅಂಶಗಳ ಒತ್ತು ನೀಡಬೇಕೆಂದು ಹೇಳಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪ್ರಮೋದ ಗಾಯಿಯವರು ಶಾಸನಗಳು ಮಾನವನ ಚಾರಿತ್ರಿಕ ಕಾಲಘಟ್ಟದ ಇತಿಹಾಸ ರಚಿಸಲು ಮಹತ್ವದ ಆಕರಗಳಾಗಿವೆ. ಇತಿಹಾಸ ಪೂರ್ವ ಕಾಲದಲ್ಲಿ ಮಾನವನ ಹುಟ್ಟು ಬೆಳವಣಿಗೆಯ ಘಟ್ಟದಲ್ಲಿ ಮಾನವ ಕೇವಲ ಶಿಲಾಉಪಕರಣಗಳನ್ನು ಉಪಯೋಗಿಸಿಕೊಂಡ, ಆ ಅವಧಿಯಲ್ಲಿ ಈ ಶಾಸನಗಳ ಬರವಣಿಗೆ ಅಸ್ತಿತ್ವದಲ್ಲಿ ಇರಲಿಲ್ಲ. ಈ ಶಾಸನಗಳು ಇತಿಹಾಸ ಕಾಲದ ರಾಜಕೀಯ ಮತ್ತು ಸಾಂಸ್ಕøತಿಕ ಚರಿತ್ರೆಯನ್ನು ರಚಿಸಲು ಮಹತ್ವದ ಆಕರಗಳಾಗಿವೆ ಎಂದು ಹೇಳಿದರು.
ಸದರಿ ಎರಡು ದಿನದ ಶಾಸನಶಾಸ್ತ್ರ ಕುರಿತಾದ ಕಾರ್ಯಗಾರವನ್ನು ಪ್ರಾದೇಶಿಕ ವಿಜ್ಞಾನ ಕೆಂದ್ರ, ಕ.ವಿ.ವಿ ಆವರಣ ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಪ್ರೊ. ಈರಣ್ಣಾ ಪತ್ತಾರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಭಾರತೀಯ ಶಾಸನಶಾಸ್ತ್ರ ಬೆಳೆದು ಬಂದ ದಾರಿಯನ್ನು ವಿವರಿಸಿದರು. ವಿಭಾಗದ ಮುಖ್ಯಸ್ಥರಾದ ಪ್ರೊ. ಶೀಲಾಧರ ಮುಗಳಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಪುರಾತತ್ವ ವಸ್ತುಸಂಗ್ರಹಾಲಯಗಳ ಇಲಾಖೆಯ ಡಾ. ಎಸ್.ಜಿ. ವಾಸುದೇವ ಅವರು ವಂದಿಸಿದರು. ಸದರಿ ಕಾರ್ಯಗಾರಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿಶ್ವವಿದ್ಯಾಲಯಗಳಿಂದ ಶಿಬಿರಾರ್ಥಿಗಳು ಬಂದಿದ್ದಾರೆ.

ಕಾರ್ಯಕ್ರಮವನ್ನು ಪ್ರೊ.ಎಲ್.ಪಿ. ಮಾರುತಿ ನಿರೂಪಿಸಿದರು. ಈ ಸಂದರ್ಭದಲ್ಲಿ ವಿಭಾಗದ ಹಿರಿಯ ಪ್ರಾಧ್ಯಾಪಕರು ಡಾ. ಎಸ್.ಕೆ. ಕಲ್ಲೋಳಿಕರ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರೊ. ಲಕ್ಷ್ಮಣ ತೆಲಗಾವಿ, ಪ್ರೊ.ದೇವರಕೊಂಡಾ ರೆಡ್ಡಿ, ಪ್ರೊ. ಸೋಮಸುಂದರರಾವ್, ಡಾ. ಟಿ.ಎಸ್. ರವಿಶಂಕರ,ಪ್ರೊ. ರಮೇಶ ನಾಯ್ಕ, ಕಲವೀರ ಮನ್ವಾಚಾರ, ಪ್ರೊ. ಲೋಕೇಶ ಮತ್ತು ಪ್ರೊ. ಸಂಗಮೇಶ ಚಲವಾದಿ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Comments