UK Suddi
The news is by your side.

ದೇಶದ ಭವಿಷ್ಯವನ್ನು ಬರೆಯುವ ಚುನಾವಣೆ:ಶಾಸಕ ಕಳಕಪ್ಪ ಬಂಡಿ.

ಗದಗ:ಬರಲಿರುವ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯು ಇದೊಂದು ಸಾಧಾರಣ ಚುನಾವಣೆಯಾಗದೇ ಇದು ಒಟ್ಟಾರೆ ದೇಶದ ಭವಿಷ್ಯವನ್ನು ಬರೆಯುವ ಚುನಾವಣೆಯಯಾಗಿದೆ ಎಂದು ಮಾಜಿ ಸಚಿವ ಹಾಲಿ ಶಾಸಕರಾದ ಕಳಕಪ್ಪ ಬಂಡಿ ಯವರು ಮಾತನಾಡಿದರು.

ಅವರು ಗದಗ ನಗರದ ವಾರ್ಡ್ ನಂ. 22,23 ರ ಶಕ್ತಿಕೇಂದ್ರದ ಬೂತ್ ಮಟ್ಟದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರ ಮಾಡಿದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಬೇಕು. ದೇಶದ ಮೇಲೆ ಭಯೋತ್ಪಾದಕರು ಮಾಡಿದ ದಾಳಿಯನ್ನು ಖಂಡಿಸಿದರು. ಕೇವಲ ಹನ್ನೆರಡು ದಿವಸಗಳಲ್ಲಿಯೇ ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ಶಿಬಿರದ ಮೇಲೆ ಏರ್‍ಸ್ಟ್ರೈಕ್ ಮಾಡಿ 250 ಕ್ಕಿಂತಲೂ ಹೆಚ್ಚಿಗೆ ಭಯೋತ್ಪಾದಕರನ್ನು ಹೊಡೆದುರುಳಿಸಿದ ಕೀರ್ತಿ ನಮ್ಮ ಸೈನ್ಯಕ್ಕೆ ಸೇರಿದ್ದು ಇದನ್ನು ಅಪಹಾಸ್ಯ ಮಾಡುತ್ತಿರುವ ಕಾಂಗ್ರೆಸ್ಸಿಗರಿಗೆ ನಾಚಿಕೆ ಆಗಬೇಕು ಎಂದು ಶಾಸಕರಾದ ಕಳಕಪ್ಪ ಬಂಡಿ ನುಡಿದರು.

ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರಾದ ಎಂ.ಎಂ.ಹಿರೇಮಠ, ಮಾಜಿ ಜಿಲ್ಲಾಧ್ಯಕ್ಷರಾದ ಎಂ.ಎಸ್.ಕರೀಗೌಡ್ರ, ಪ್ರಮುಖರಾದ ಕೆ.ಪಿ.ಕೋಟಿಗೌಡ್ರ, ಎಂ.ಎ.ಸಂಗನಾಳ ವಕೀಲರು, ಬಸವರಾಜ ಜಂತ್ಲಿ, ರಾಚಪ್ಪ ಕೋರಿ, ಮುದಕಪ್ಪ ಸತ್ಯಪ್ಪನವರ, ಶಂಕರ ನೀರಲಕೇರಿ, ಬಸವರಾಜ ಪೂಜಾರ, ರವೀ ಜೋಗಿ, ಶಿವಪ್ಪ ಮುಳ್ಳಾಳ, ಸುರೇಶ ಹೆಬಸೂರ, ಶೇಕಪ್ಪ ಹೊಂಬಳ, ಅಂದಪ್ಪ ಕುಂಬಾರ, ಚನ್ನಮ್ಮ ಹುಳಕಣ್ಣವರ, ಗೀತಾ ಇಂಗಳೆ, ಸಿದ್ದು ಸತ್ಯಪ್ಪನಮಠ, ಪಾರ್ವತಿ ಮರೀಗೌಡ್ರ, ಕುಮಾರ ಗಂಗಿಮಡಿ, ಅಂದಪ್ಪ, ವಿರೇಶ ಮಾನ್ವಿ, ತೋಟಪ್ಪ ಕರಮುಡಿ, ಈರಣ್ಣ ಮುದೇನಗುಡಿ, ಕಳಸಾಪೂರ, ಮಂಜು ಡಂಬಳ ಶಿವಾಜಿ ತುಕ್ಕಪ್ಪನವರ, ಶ್ರೀಕಾಂತ ಯಲಿಗಾರ, ಶಾಂತವ್ವ ರೋಣದ ಬಸುರಾಜ ರೋಣದ, ಸುನೀಲ ಒಬಾಜಿ, ಈಶ್ವರ ಹಿರೇಮನಿ, ಸಂತೋಷ ಕೊಳಿವಾಡ ಶಂಕ್ರು ಪಾಟೀಲ, ಸುರೇಶ ಮರಳಪ್ಪನವರ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಪ್ರಭು ಗಂಜಿಹಾಳ
ಮೊ: 9448775346

Comments