UK Suddi
The news is by your side.

ದ್ವಿತೀಯ ಪಿಯುಸಿ ಪರೀಕ್ಷೆ: ನಕಲು 10 ವಿದ್ಯಾರ್ಥಿಗಳು ಡಿಬಾರ್.

ವಿಜಯಪುರ: ಜಿಲ್ಲೆಯಾದ್ಯಂತ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಕಲಿಗೆ ಯತ್ನಿಸಿದ 10 ವಿದ್ಯಾರ್ಥಿಗಳನ್ನು ಜಿಲ್ಲಾ ವಿಚಕ್ಷಣ ದಳದವರು ಡಿಬಾರ್ ಮಾಡಿದ್ದಾರೆ.

ಇತಿಹಾಸ ಮತ್ತು ಜೀವಶಾಸ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ಮುದ್ದೇಬಿಹಾಳದ ಜ್ಞಾನಭಾರತಿ ಪಪೂ ಕಾಲೇಜ್‌ನಲ್ಲಿ 6 ಹಾಗೂ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಆಕ್ಸರ್ಡ್ ಪರೀಕ್ಷಾ ಕೇಂದ್ರದಲ್ಲಿ ನಾಲ್ವರು ಸೇರಿದಂತೆ ಒಟ್ಟು 10 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ ಎಂದು ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಂಕರ ಅಮಾತೆ ತಿಳಿಸಿದ್ದಾರೆ.

Comments