UK Suddi
The news is by your side.

ಪ್ರಧಾನಿ ಮೋದಿಗೆ ಓಟ್ ಹಾಕ್ಬೇಡಿ ಅಂತ ನಾನು ಯಾರಿಗೂ ಹೇಳುವುದಿಲ್ಲ: ಜನಾರ್ದನ ಪೂಜಾರಿ

ಮಂಗಳೂರು: ದೇಶದಲ್ಲಿ ಇದೀಗ ಪಕ್ಷಾಂತರ ಪರ್ವ ಆರಂಭವಾಗಿದ್ದು , ಅದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಹೊಡೆತ ಬೀಳುತ್ತಿದೆ , ಸೋನಿಯಾ ಗಾಂಧಿ ಆಪ್ತ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಈಗಾಗಲೆ ಬಿಜೆಪಿ ಕೈ ಹಿಡಿದ್ದಾರೆ , ಹಾಗೆ ಮಂಗಳೂರು ಕ್ಷೇತ್ರದಲ್ಲೂ ಹಿರಿಯ ರಾಜಕಾರಣಿಯೊಬ್ಬರು ಬಿಜೆಪಿ ಕಡೆಗೆ ಹೊರಟಿದ್ದಾರೆಯೇ ಎಂಬ ಮಾತಿಗೆ ಇಂದು ಮತ್ತಷ್ಟು ಪುಷ್ಠಿ ಸಿಕ್ಕಿದೆ , ಆ ರಾಜಕಾರಣಿ ಯಾರು ಅಲ್ಲ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ .

ಇಂದು ಮೋದಿ ಪರ ಬ್ಯಾಟಿಂಗ್ ನಡೆಸಿದ ಜನಾರ್ದನ ಪೂಜಾರಿ “ಭ್ರಷ್ಟಾಚಾರ ನಿರ್ಮೂಲನೆ ಆಗ್ಬೇಕಾದ್ರೆ ಪ್ರಧಾನಿ ಮೋದಿಯಂತವರು ಬೇಕು, ರಾಜಕೀಯವಾಗಿ ಅವರು ಇನ್ನಷ್ಟು ಪ್ರಭಲರಾಗಿ ಬೆಳೆಯಬೇಕು,ಭ್ರಷ್ಟಾಚಾರ ವಿರುದ್ಧ ಅವರು ಹೋರಾಟ ನಡೆಸುತ್ತಿದ್ದಾರೆ, ಅದರಲ್ಲಿ ಅವರು ಜಯ ಗಳಿಸುತ್ತಾರೆ, ಮೋದಿಯವರಿಗೆ ಓಟ್ ಹಾಕ್ಬೇಡಿ ಅಂತ ನಾನು ಯಾರಿಗೂ ಹೇಳುವುದಿಲ್ಲ” ಎಂದು ಅಚ್ಚರಿಯ ಹೇಳಿಕೆ ನೀಡಿದರು.

Comments