UK Suddi
The news is by your side.

ಬಂಡೀಪುರ ಉದ್ಯಾನವನಕ್ಕೆ ಮತ್ತೆ ಬೆಂಕಿ.

ಚಾಮರಾಜನಗರ:ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಗುರುವಾರ ಸಂಜೆ ಮತ್ತೆ ಬೆಂಕಿ ಕಾಣಿಸಿಕೊಂಡಿದೆ.ಇದರಿಂದಾಗಿ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ ಎಂದು ತಿಳಿದು ಬಂದಿದೆ.

ಬೆಂಕಿಯ ಕೆನ್ನಾಲಿಗೆ ತುತ್ತಾದ ಬಂಡಿಪುರ ರಾಷ್ಟ್ರೀಯ ಉದ್ಯಾನವನದ
ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿಗಳು ಹರಸಾಹಸ ನಡೆಸುತ್ತಿದ್ದಾರೆ.

ಇದರಿಂದಾಗಿ ಕೆಲ ಕಾಲ ದಿಕ್ಕು ತೋಚದಂತಾದ ಸಿಬ್ಬಂದಿಗಳು ಏದೆಗುಂದದೆ ಬೆಂಕಿ ನಂದಿಸುವಲ್ಲಿ ನಿರತವಾಗಿದ್ದರು.ಸಿಬ್ಬಂದಿಗೆ ಅಗ್ನಿಶಾಮಕ ದಳ ಸಿಬ್ಬಂದಿ,ಸ್ಥಳೀಯರು ಸಹಕಾರ ನೀಡಿದ್ದು,ಬೆಂಕಿ ಆರಿಸುವ ಯತ್ನದಲ್ಲಿ ಅರಣ್ಯ ಸಿಬ್ಬಂದಿ ಸ್ವಲ್ಪ ಮಟ್ಟಿಗೆ ಯಶ ಸಾಧಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Comments