UK Suddi
The news is by your side.

ಬಸವ ಧರ್ಮ ಪೀಠದ ಉತ್ತರಾಧಿಕಾರಿಯಾಗಿ ಜಗದ್ಗುರು ಮಾತೆ ಗಂಗಾದೇವಿ.

ಕೂಡಲಸಂಗಮ:ಕೆಲ ದಿನಗಳಿಂದ ಶ್ವಾಸಕೋಶದ ಸೋಂಕು,ಕಿಡ್ನಿಗಳ ವೈಫಲ್ಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ (74) ಅವರು ಗುರುವಾರದಂದು ಮದ್ಯಾಹ್ನ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.

ಬಸವ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಈ ಹಿಂದೆಯೇ ಸೂಚನೆ ನೀಡಿರುವಂತೆ ಜಗದ್ಗುರು ಮಾತೆ ಗಂಗಾದೇವಿ ಅವರನ್ನು ಉತ್ತರಾಧಿಕಾರಿಯಾಗಿ ಘೋಷಣೆ ಮಾಡಲಾಗಿದೆ.

ಹೌದು,ಕೂಡಲಸಂಗಮ ಬಸವ ಧರ್ಮ ಪೀಠದ ಉತ್ತರಾಧಿಕಾರಿಯಾಗಿ ಮಾತೆ ಗಂಗಾದೇವಿ ಅವರನ್ನು ಬಸವ ಪೀಠದ ಅಧ್ಯಕ್ಷೆ ಮಾತೆಮಹಾದೇವಿ ಅವರು 2017ರ ಜನೇವರಿ 13ರಂದು ಕೂಡಲಸಂಗಮದಲ್ಲಿ ನಡೆದ ಶರಣ ಮೇಳದಲ್ಲಿ ಘೋಷಿಸಿದ್ದರು.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾತೆ ಮಹಾದೇವಿ ಅವರು ಗುರುವಾರ ಮಧ್ಯಾಹ್ನ ಲಿಂಗೈಕ್ಕೆರಾಗಿದ್ದರು.ಕೂಡಲಸಂಗಮ ಬಸವ ಧರ್ಮ ಪೀಠದ ಉತ್ತರಾಧಿಕಾರಿಯಾಗಿ ಮಾತೆ ಗಂಗಾದೇವಿ ಅವರು ಮುಂದಿನ ವಿಧಿ- ವಿಧಾನಗಳನ್ನು ಗಂಗಾದೇವಿ ಅವರು ನಡೆಸಿಕೊಡುತ್ತಾರೆ ಎಂದು ಚೆನ್ನಬಸವೇಶ್ವರ ಜ್ಞಾನ ಪೀಠದ ಪೀಠಾಧ್ಯಕ್ಷ ಚೆನ್ನಬಸವಾನಂದ ಸ್ವಾಮೀಜಿ ಘೋಷಿಸಿದ್ದಾರೆ.

Comments