UK Suddi
The news is by your side.

ಬಿಎಸ್ಪಿ ಸೇರ್ಪಡೆಯಾದ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ.

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಅದಕ್ಕೆ ಪೂರಕವೆಂಬಂತೆ ಮುಸ್ಲಿಮ್ ಸಮುದಾಯದ ಪ್ರಭಾವಿ ನಾಯಕರಾದ ಶರಿಯರ್ ಖಾನ್ ಬಿಎಸ್ ಪಿಗೆ ಗುರುವಾರದಂದು ಅಧಿಕೃತವಾಗಿ ಸೇರ್ಪಡೆಯಾದರು. ಮೂಲಕ ಹೊಸ ಸಂಚಲನವನ್ನು ಮೂಡಿಸಿದ್ದಾರೆ. ಬಂಗಾರಪ್ಪ ಅವರ ಆತ್ಮೀಯರೂ ಆಗಿದ್ದ ಶರಿಯರ್ ಖಾನ್ ಅವರು ಬಿಎಸ್ ಪಿಗೆ ಸೇರ್ಪಡೆಗೊಂಡಿದ್ದಾರೆ.

ಶರೀಯರ್ ಖಾನ್ ಅವರ ಸೇರ್ಪಡೆಯಿಂದಾಗಿ ರಾಜ್ಯಾದ್ಯಂತ ಮುಸ್ಲಿಮರು ಬಿಎಸ್ ಪಿಯ ಕಡೆಗೆ ಒಲವು ತೋರಿಸಲಿದ್ದಾರೆ ಎನ್ನಲಾಗಿದೆ. ರಾಜ್ಯ-ದೇಶದಲ್ಲಿ ಬಹುತೇಕ ಸಂಘಟನೆಗಳ ಜೊತೆ ಉತ್ತಮ ಸಂಬಂಧ ಇರುವ ಶರೀಯರ್ ಖಾನ್ ಅವರು ಬಿಎಸ್ಪಿಗೆ ಸೇರ್ಪಡೆಗೊಂಡಿರುವುದರಿಂದಾಗಿ ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಮುಸ್ಲಿಮರು ಬೇರೆ ಪಕ್ಷಗಳಿಗೆ ಈಗಾಗಲೇ ನೀಡಿರುವ ಬೆಂಬಲವನ್ನು ವಾಪಸ್ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ, ಹಾಲಿ ಶಾಸಕ ಎನ್.ಮಹೇಶ್, ಬಿಎಸ್ ಪಿ 28 ಕ್ಷೇತ್ರಗಳಲ್ಲಿಯೂ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.

ಇಂದು ಬಿಎಸ್ಪಿ ಮುಖಂಡರುಗಳಾದ ಅಶೋಕ್ ಸಿದ್ಧಾರ್ಥ್, ಎಂ.ಎಲ್.ಥೋಮರ್ ಅವರ ಸಮ್ಮುಖದಲ್ಲಿ ಶರೀಯರ್ ಖಾನ್ ಅಧಿಕೃತವಾಗಿ ಬಿಎಸ್ ಪಿಗೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಶಿಕ್ಷಣ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್, ರಾಜ್ಯಾಧ್ಯಕ್ಷ ಪ್ರೊ.ಹರಿರಾಮ್ ಸೇರಿದಂತೆ ಪಕ್ಷದ ನಾಯಕರು ಶರೀಯರ್ ಖಾನ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು

Comments