UK Suddi
The news is by your side.

ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಕಾರ್ಯಕರ್ತರು ಶ್ರಮ ವಹಿಸಲು ಕರೆ.

ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಭೆ

ಗದಗ:ನಗರದ ವಾರ್ಡ್ ನಂ. 16 ರ ರಹಿಮತ್ ನಗರ, ಜನತಾ ಕಾಲೂನಿ, ಮ್ಯಾಗೇರಿ ಓಣಿ, ಡೊರ್ ಓಣಿ, ತಳಗೇರಿ ಓಣಿ ಬೂತ್ ನಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಶಕ್ತಿ ಕೇಂದ್ರ ಪ್ರಮುಖರ ಸಭೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಶಹರ ಅಧ್ಯಕ್ಷರಾದ ಜಗನ್ನಾಥಸಾ ಭಾಂಡಗೆ ಸಭೆಯನ್ನು ಉದ್ದೇಶಿಸಿ ಪಕ್ಷದ ಎಲ್ಲ ಕಾರ್ಯಕ್ರಮಗಳ ಬಗ್ಗೆ ಕಾರ್ಯಕರ್ತರಿಗೆ ವಿವರಣೆಯನ್ನು ನೀಡಿದರು.

ಪಕ್ಷದ ಹಿರಿಯರಾದ ಶ್ರೀಕಾಂತ ಖಟವಟೆಯವರು ಮಾತನಾಡಿ ನರೇಂದ್ರ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಎಲ್ಲ ಕಾರ್ಯಕರ್ತರು ಶ್ರಮ ವಹಿಸಬೇಕೆಂದು ಕರೆ ಕೊಟ್ಟರು.

ಕಾರ್ಯಕ್ರಮದ ಸಂದರ್ಭದಲ್ಲಿ ವಾರ್ಡಿನ ಪ್ರಮುಖರಾದ ಲಕ್ಷ್ಮಣ ದೊಡ್ಡಮನಿ, ಅಶೋಕ ಕುಡತಿನಿ ಹಾಗೂ ಪಕ್ಷದ ಹಿರಿಯರಾದ ಕಾಂತೀಲಾಲ ಬನ್ಸಾಲಿ, ಎಂ.ಎಂ.ಹಿರೇಮಠ, ಮಂಜುನಾಥ ಕೊಟ್ನಿಕಲ್, ಈರ್ಷಾದ ಮಾನ್ವಿ, ಲಕ್ಷ್ಮಣ ಗೋಕಾವಿ, ಫಕ್ಕಿರಪ್ಪ ಹಾದಿಮನಿ, ಕುಮಾರಿ ಪಾರ್ವತಿ ದೊಡ್ಡಮನಿ, ಮುತ್ತು ಸೀತಿಮನಿ, ಮಲ್ಲಿಕ್ ಸಂಗಾಪೂರ, ಭರತ ಘೊಡ್ಕೆ ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ಪ್ರಭು ಗಂಜಿಹಾಳ
ಮೊ:9448775346

Comments