UK Suddi
The news is by your side.

ಮೋದಿ ಪಿಎಂ ಆಗುವುದು ಸೂರ್ಯಚಂದ್ರರಷ್ಟೇ ಸತ್ಯ:ಎನ್.ವೈ ಗೋಪಾಲಕೃಷ್ಣ ಅಭಿಮತ

ಮೊಳಕಾಲ್ಮೂರು: ದೇಶದಲ್ಲಿ ಹುಡುಗರಿಗೆಲ್ಲಾ ಅಧಿಕಾರ ಕೊಟ್ಟರೆ ದೇಶದ ಅಧಃ ಪತನ ಖಂಡಿತ. ಆದ್ದರಿಂದ ಮೋದಿಯಂತರ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಕೆಲಸವಾಗಬೇಕು. ಈ ಭಾರೀ ಖಂಡಿತ ಲೋಕಸಭೆ ಚುನಾವಣೆಯಲ್ಲಿ ಮೋದಿ ಪ್ರಧಾನಮಂತ್ರಿಯಾಗುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಕೂಡ್ಲಿಗಿ ಶಾಸಕರಾದ ಎನ್.ವೈ ಗೋಪಾಲಕೃಷ್ಣ ತಿಳಿಸಿದರು.

ಪಟ್ಟಣದ ಶಿವಸದನದಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪಟ್ಟಣದ ವಿವಿಧ ಪಕ್ಷÀದ ಮುಖಂಡರು, ಕಾರ್ಯಕರ್ತರು ಸೇರ್ಪಡೆಯಾದರು.
ಎನ್.ವೈ.ಜೀ ತಮ್ಮ ಮಾತುಗಳನ್ನು ಮುಂದುವರೆಸಿ, ನಾನು ನೇರವಾಗಿ ಸತ್ಯವನ್ನೇ ಮಾತನಾಡುತ್ತೇನೆ. ಕಾಂಗ್ರೇಸ್‍ನಿಂದಲೇ ಸತತವಾಗಿ 5ಭಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದರೆ ಆ ವಿಶ್ವಾಸವನ್ನು ಕಾಂಗ್ರೇಸ್ ಉಳಿಸಿಕೊಳ್ಳಲಿಲ್ಲ. ಕಾಂಗ್ರೇಸ್ ಸರಿಯಾದ ಟೈಂನಲ್ಲಿಯೇ ಕೈಕೊಡುತ್ತದೆ. ಈ ಹಿಂದೆ ನಾನು ಕಾಂಗ್ರೇಸ್‍ನಲ್ಲಿದ್ದರು ಸಹ ಯಾವತ್ತೂ ಸಹ ಪಾರ್ಟಿಯ ಪರವಾಗಿರಲಿಲ್ಲ. ತಾಲ್ಲೂಕಿನಲ್ಲಿರುವ ಜಲ್ವಂತ ಸಮಸ್ಯೆ ನೀರಿನ ಸಮಸ್ಯೆಯನ್ನು ಪರಿಹರಿಸಲು ಸಾಕಷ್ಟು ಶ್ರಮಿಸಿದ್ದೇನೆ. ಸತ್ಯ ಮತ್ತು ಪ್ರಾಮಾಣಿಕ ಕೆಲಸದ ಕಡೆಗೆ ಒತ್ತನ್ನು ನೀಡುತ್ತದೆ. ಸಿದ್ದರಾಮಯ್ಯ ಸಿಎಂ ಆಗಿದ್ದೇ ಆದರೆ ರಾಜ್ಯ ಸರ್ವನಾಶವಾಗುವುದು ನಿಶ್ಚಿತ. ತಮ್ಮ ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ಕೇವಲ 38ಸೀಟುಗಳು ಬಂದ ಜೆಡಿಎಸ್ ಜೊತೆ ಸೇರಿಕೊಂಡು ಅಧಿಕಾರ ನಡೆಸುತ್ತಿದೆ. ಈ ಭಾರೀ ಎಲ್ಲರೂ ಬಿಜೆಪಿ ಪಕ್ಷಕ್ಕೆ ಮತಹಾಕಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಶ್ರೀರಾಮುಲು, ಪಕ್ಷದ ಮುಖಂಡರು, ಕಾರ್ಯಕರ್ತರು, ಇತರರು ಹಾಜರಿದ್ದರು.
ವರದಿ: ಪ್ರಭಾಕರ.ಪಿ
9980796846

Comments