UK Suddi
The news is by your side.

ಸವದತ್ತಿಗೆ ಬೇಡ, ಬೈಲಹೊಂಗಲ ತಾಲೂಕಿಗೆ ಸೇರಿಸಿ: ಲಂಬಾಣಿಗರ ಆಗ್ರಹ..!

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಕಾರ್ಯ ವ್ಯಾಪ್ತಿಯಲ್ಲಿ ಬರುವ ಲಂಬಾಣಿ ತಾಂಡಾಗಳನ್ನು ಬೈಲಹೊಂಗಲ ತಾಲೂಕಿಗೆ ಸೇರಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ಬಂಜಾರಾ ಸೇವಾ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಿನ್ನೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡಿಸಿದ ಅವರು ಸವದತ್ತಿ ತಾಲೂಕಿನ ಮುರಗೋಡ ಹೋಬಳಿಯ ಕಾರ್ಯ ವ್ಯಾಪ್ತಿಯಲ್ಲಿ ಬರುವ ಲಂಬಾಣಿ ಜನ ವಸತಿ ತಾಂಡಾಗಳಾದ ಹಲಕಿ ತಾಂಡೆ, ಹೋಲಿಕೇರಿ, ರಾಮಾಪೂರ, ರುದ್ರಾಪೂರ, ಕಾಗಿಹಾಳ, ಕಾರ್ಲಕಟ್ಟಿ ತಾಂಡಾಗಳು ಸೇರಿದಂತೆ ಎಲ್ಲಮ್ಮನಗುಡ್ಡ ತಾಂಡಾಗಳನ್ನು ನೂತನವಾಗಿ ಘೋಷಣೆ ಮಾಡಿದ ಯರಗಟ್ಟಿ ತಾಲೂಕಿಗೆ ಸೇರಿಸಲು ಮುಂದಾಗಿದ್ದಾರೆ.

ಆದರೆ ಯರಗಟ್ಟಿಯು ಈ ತಾಂಡಾಗಳ ಪ್ರದೇಶದಿಂದ ದೂರವಿದ್ದು ಜನರು ಕಚೇರಿಗಳಿಗೆ ಸಂಭಂದಿಸಿದ ಕಾರ್ಯಗಳಿಗಾಗಿ ಸಂಚರಿಸುವುದು ಕಷ್ಟಕರವಾಗುತ್ತದೆ ಅದ್ದರಿಂದ ಈ ಎಲ್ಲ ತಾಂಡಾಗಳು ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವುದರಿಂದ ಮತ್ತು ಸಮೀಪ ಇರುವುದರಿಂದ ಬೈಲಹೊಂಗಲ ತಾಲೂಕಿಗೆ ಸೇರಿಸಬೇಕೆಂದು ವತ್ತಾಯಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಜುನಾಥ ಪಮ್ಮಾರ ಮಾತನಾಡಿ ಬೈಲಹೊಂಗಲ ತಾಲೂಕು ಎಲ್ಲ ತಾಂಡಾಗಳಿಗೆ ಸಮೀಪ ಇರುವುದರಿಂದ ದಿನ ನಿತ್ಯ ವ್ಯಾಪಾರ ವ್ಯವಹಾರಗಳನ್ನು ಮಾಡಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಸಂಚರಿಸಲು ಸುಲಭವಾಗಿದೆ ಅದ್ದರಿಂದ ಬೈಲಹೊಂಗಲ ತಾಲೂಕಿಗೆ ಈ ಎಲ್ಲ ತಾಂಡಾಗಳನ್ನು ಸೇರಿಸಬೇಕೆಂದರು.

ಪ್ರತಿಭಟನೆಯಲ್ಲಿ ರಮೇಶ ಲಮಾಣಿ, ಲಚ್ಚಪ್ಪ ಲಮಾಣಿ, ಸೋಮಪ್ಪಾ ಗೌಡರ, ಶಿವಪ್ಪಾ ಲಮಾಣಿ, ಬಾಬು ಲಮಾಣಿ, ಸುಭಾಸ ಕಾರಬಾರಿ, ಸೋಮಪ್ಪಾ ಲಮಾಣಿ, ಬೀಮಪ್ಪಾ ಕಾರಬಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

ವರದಿ: ಚಿದಂಬರ ಕುರುಬರ.

Comments