UK Suddi
The news is by your side.

ಎ.ಮಂಜು ಬಿಜೆಪಿಗೆ ಬರುವುದಾದರೆ ನಾವು ಸ್ವಾಗತಿಸುತ್ತೇವೆ:ಶಾಸಕ ಪ್ರೀತಂ ಗೌಡ.

ಹಾಸನ:ಮಾಜಿ ಸಚಿವ ಎ.ಮಂಜು ಬಿಜೆಪಿಗೆ ಬರುವುದಾದರೆ ನಾವು ಸ್ವಾಗತಿಸುತ್ತೇವೆ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

ಬಿಜೆಪಿಗೆ ಯಾವಾಗ ಸೇರಬೇಕೆಂದು ನಿರ್ಧರಿಸುತ್ತಾರೋ ಆವಾಗ ಪಕ್ಷ ಸೇರುತ್ತಾರೆ.ಇದು ದೇಶದ ಭದ್ರತೆಗಾಗಿ ನಡೆಯುತ್ತಿರುವ ಚುನಾವಣೆಯಾಗಿದೆ.ತುಮಕೂರಿನಲ್ಲೂ ಹೆಚ್.ಡಿ.ದೇವೇಗೌಡ ನಿಂತರೂ ಸೋಲಿಸುತ್ತೇವೆ ಎಂದರು.

ಮಾಜಿ ಸಚಿವ ಎ.ಮಂಜು, ಸುದ್ದಿಗಾರರೊಂದಿಗೆ ಮಾತನಾಡಿ, ಕುಟುಂಬದ ವಿರುದ್ದ ಇರಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಾರ್ಯಕರ್ತರು ನಾವು ನಿಮ್ಮೊಂದಿಗೆ ಇರುತ್ತೇವೆ ಅಂದಿದ್ದಾರೆ, ನಾನು ಪಕ್ಷ ಸೇರ್ಪಡೆ ಕುರಿತು ಸೋಮವಾರ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.

Comments