UK Suddi
The news is by your side.

ದೇಶದ ಕೊನೆಯ ಚುನಾವಣೆ ಇದು,ಮುಂದೆ ಚುನಾವಣೆ ನಡೆಯೋದಿಲ್ಲ:ಸಂಸದ ಸಾಕ್ಷಿ ಮಹಾರಾಜ್.

ಉನ್ನಾವ:”ದೇಶದ ಕೊನೆಯ ಚುನಾವಣೆ ಇದು,2024 ರಲ್ಲಿ ಚುನಾವಣೆ ಆಗುವುದಿಲ್ಲ” ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

ಉನ್ನಾವ ನಲ್ಲಿ ಆಯೋಜಿಸಿದ್ದ” ಸಮರ್ಪಣ ನಿಧಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ದೇಶದ ಕೊನೆಯ ಚುನಾವಣೆ ಇದು, 2024 ರಲ್ಲಿ ಚುನಾವಣೆ ಆಗುವುದಿಲ್ಲ, ಏಕೆಂದರೆ ನರೇಂದ್ರ ಮೋದಿ ಅವರು ಇಡೀ ವಿಶ್ವದ ನಾಯಕರಾಗಿದ್ದು, ಇದೇ ಕೊನೆಯ ಚುನಾವಣೆ ಅವರನ್ನು ಬಹುಮತದಿಂದ ಗೆಲ್ಲಿಸಿ ಎಂದು ಹೇಳಿದ್ದಾರೆ.

ಮೋದಿ ಇದ್ದರೆ ಈ ದೇಶ ಇದೆ ಎಂಬ ಚರ್ಚೆ ದೇಶದೊಳಗೆ ನಡೆದಿದೆ. ಪ್ರಸ್ತುತ ಚುನಾವಣೆ ದೇಶದ ಚುನಾವಣೆಯಾಗಿದೆ. ನಾನೊಬ್ಬ ಸನ್ಯಾಸಿಯಾಗಿ ಹೇಳುತ್ತಿರುವೇ ಇದೆ ದೇಶದ ಕೊನೆಯ ಚುನಾವಣೆ ಮುಂದೆ 2024 ರಲ್ಲಿ ಚುನಾವಣೆ ಆಗುವುದಿಲ್ಲ ಎಂದು ಹೇಳಿದ್ದಾರೆ.

Comments