UK Suddi
The news is by your side.

ಪ್ರತಿಯೊಬ್ಬ ಸೈನಿಕರ ತ್ಯಾಗ ಬಲಿದಾನ ಅಮರವಾಗಿದೆ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ.

ಬೆಳಗಾವಿ: ದೇಶಕ್ಕಾಗಿ ಮಡಿದ ಪ್ರತಿಯೊಬ್ಬ ಸೈನಿಕರ ತ್ಯಾಗ ಬಲಿದಾನ ಅಮರವಾಗಿದ್ದು ಹಾಗೂ ಭಯೋತ್ಪಾದಕರಿಂದ ದೇಶದ ಒಳಿತಿಗಾಗಿ ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ವೀರಯೋದರು ನಮ್ಮ ದೇಶದ ಆಧಾರ ಸ್ಥಂಭಗಳು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.

ಅವರು ಗ್ರಾಮೀಣ ಕ್ಷೇತ್ರದ ಗಣೇಶಪುರದ ಲಕ್ಷ್ಮೀ ನಗರದಲ್ಲಿ ಜೈ ಜವಾನ ಮಾಜಿ ಸೈನಿಕರ ಸಂಘವನ್ನು ಉದ್ಘಾಟಿಸಿ ನಂತರ ಮಾತನಾಡಿದರು. ಈ ಸಂಘಟನೆಯು ದೊಡ್ಡದಾಗಿ ಬೆಳೆಯಲಿ ಎಂದು ಹಾರೈಸಿದರು ಇದೇ ವೇಳೆ ಇತ್ತೀಚಿಗೆ ಕಾಶ್ಮೀರದ ಪುಲ್ವಾಮಾದಲ್ಲಿ ವೀರಮರಣವನ್ನಪ್ಪಿದ ಸೈನಿಕರನ್ನು ಸ್ಮರಿಸಿ ಶೃದ್ಧಾಂಜಲಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜೈ ಜವಾನ ಮಾಜಿ ಸೈನಿಕರ ಸಂಘದ ಅದ್ಯಕ್ಷರು, ಪದಾಧಿಕಾರಿಗಳು, ಇತರರು ಇದ್ದರು.

Comments