UK Suddi
The news is by your side.

ಬಿಜೆಪಿಯಲ್ಲಿ ಬಸವ ತತ್ವಕ್ಕೆ ಅವಕಾಶವಿಲ್ಲ:ಸಿಎಂ ಇಬ್ರಾಹಿಂ

ಚಾಮರಾಜನಗರ : ಈ ದೇಶ ದರಿದ್ರ ಅವಕಾಶ ಕಂಡಿದ್ದು ಮೋದಿ ಆಳ್ವಿಕೆಯಲ್ಲಿ. ಕೆಟ್ಟಕಾಲಕ್ಕೆ ದುಡ್ಡು ಇಡ್ತಿದ್ವಿ. ಈಗ ದುಡ್ಡಿಗೂ ಕೆಟ್ಟ ಕಾಲ ಬಂದಿದೆ. ವಿವೇಚನೆ ಇಲ್ಲದ ಪ್ರಧಾನಿ ಬಂದಿದ್ದಾರೆ ಎಂದು ಸಿ ಎಂ ಇಬ್ರಾಹಿಂ ತೀವ್ರ ವಾಗ್ದಾಳಿ ನಡೆಸಿದರು.

ಚಾಮರಾಜನಗರದಲ್ಲಿ‌ ನಡೆದ ಕಾಂಗ್ರೆಸ್ ಪರಿವರ್ತನಾ ರ್ಯಾಲಿಯಲ್ಲಿ ಸಿ.ಎಂ. ಇಬ್ರಾಹಿಮ್ ಮಾತನಾಡಿ ಮೋದಿ ಆಳ್ವಿಕೆಯಲ್ಲಿ ನಮಗೆ ವಿದೇಶದಲ್ಲಾಗಲಿ, ವಿಶ್ವಸಂಸ್ಥೆಯಲ್ಲಾಗಲಿ ಬಲವಿಲ್ಲ. ರಾಜಕಾರಣಿ ಕೆಲಸ ಗುಡಿ ಮಸೀದಿ ಕಟ್ಟೋದಲ್ಲ, ಬಡವನ ಮನೆ ಕಟ್ಟೋದು ಎಂದು ಹೇಳಿದರು.

ನಮ್ಮ ರಾಷ್ಟ್ರದ ಮಾಧ್ಯಮಗಳು ಎಚ್ಚೆತ್ತುಕೊಳ್ಳಬೇಕು.ಮನಮೋಹನ್ ಸಿಂಗ್ ಕಾಲದಲ್ಲಿ ಹಿಂದೆ ಗುರು ಮುಂದೆ ಗುರಿ ಇತ್ತು, ಸಾಗುತ್ತಿತ್ತು ಸೈನಿಕರ ಹಿಂಡು.ಇಂದು ಹಿಂದೆ ಗುರು, ಮುಂದೆ ಗುರಿ ಎರಡೂ ಇಲ್ಲ. ಇಂದು ಬಿಜೆಪಿಯಲ್ಲಿ ಎಲ್ಲಾ ಸಮಾಜಕ್ಕೂ ಸ್ಥಾನಮಾನ ಇಲ್ಲ. ಅಲ್ಲಿ ಬಸವ ತತ್ವಕ್ಕೆ ಅವಕಾಶವಿಲ್ಲ ಎಂದರು.

Comments