UK Suddi
The news is by your side.

ಬಿಜೆಪಿ ಟಿಕೆಟ್ ಸಿಕ್ಕಾಗ ಅಪ್ಪ ಬೈದಿದ್ರು:ಅನಂತಕುಮಾರ್ ಹೆಗಡೆ

ಕಾರವಾರ:ನನ್ನ ತಂದೆಯೇ ನನಗೆ ಓಟ ಹಾಕಿರಲಿಲ್ಲ.ನನಗೆ ಮೊದಲ ಭಾರಿ ಬಿಜೆಪಿ ಟಿಕೇಟ್ ಸಿಕ್ಕಾಗ ಅಪ್ಪ ಬೈದಿದ್ರು ಎಂದು ಉತ್ತರಕನ್ನಡ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಹೇಳಿದರು.

ದೇವಳಮಕ್ಕಿಯಲ್ಲಿ ನಡೆದ ಪ್ರಚಾರ ವೇಳೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಾತನಾಡುತ್ತ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಯಾಕೆ ಟಿಕೇಟ್ ತುಗೊಂಡಿದಿಯಾ..? ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಬೇಕಿತ್ತು.ಐದು ಭಾರೀ ನಾನು ಸ್ಪರ್ಧೆ ಮಾಡಿದಾಗಲು ನನ್ನ ಅಪ್ಪನೆ ನಂಗೆ ಓಟ ಹಾಕಿದ್ದಾರೆ ಎನ್ನುವ ವಿಶ್ವಾಸವಿಲ್ಲ. ಈ ಭಾರಿ ಮೋದಿ ಅವರನ್ನ ನೋಡಿ ಅಪ್ಪನ್ನೆ ಬಂದು ಬಿಜೆಪಿಗೆ ಓಟ್ ಹಾಕುತ್ತೇನೆ ಎಂದಿದ್ದಾರೆ ಎಂದರು.

Comments