UK Suddi
The news is by your side.

ಮಹಿಳೆ ಎಲ್ಲ ರಂಗಗಳಲ್ಲಿ ಮುಂಚೂಣಿಗೆ ಬರಲಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ.

ಮುರಗೋಡ: ಮಹಿಳೆಯು ನಾಡಿನ ಸಂಸ್ಕೃತಿ, ಸಂಪ್ರದಾಯಗಳನ್ನು ಅನುಸರಿಸುವುದರೊಂದಿಗೆ ಕ್ರಿಯಾಶೀಲತೆಯಿಂದ ಪುರುಷರಿಗೆ ಸಮನಾಗಿ ಸಾಧನೆಯತ್ತ ಹೆಜ್ಜೆ ಹಾಕಬೇಕು ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.

ಸ್ಥಳೀಯ ಪವಾಡ ಪುರುಷ, ಪರಮ ತಪಸ್ವಿ, ಶ್ರೀ ಮಹಾಂತ ಶಿವಯೋಗಿಗಳ 47ನೇ ವಾರ್ಷಿಕ ಪುಣ್ಯಸ್ಮರಣೋತ್ಸವ ಜಾತ್ರಾ ಮಹೋತ್ಸವ ಹಾಗೂ ತ್ರಿಶುಂಗಪುರ ಉತ್ಸವ ಪ್ರಯುಕ್ತ ಶ್ರೀ ದುರದುಂಡೀಶ್ವರ ಮಠದ ಆವರಣದಲ್ಲಿ ಏರ್ಪಡಿಸಿದ್ದ ಮಹಿಳಾಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು ಮಹಿಳೆ ಮನೆಯ ಅಥವಾ ಹೊರಗಿನ ಕೆಲಸವನ್ನು ಅತೀ ಜವಾಬ್ದಾರಿಯಿಂದ ನಿಭಾಯಿಸಬೇಕು. ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ಎಲ್ಲ ರಂಗಗಳಲ್ಲಿಯೂ ಮುಂಚೂಣಿಗೆ ಬಂದು ಬದುಕಿನಲ್ಲಿ ಯಶಸ್ಸು ಗಳಿಸಬೇಕು ಈ ದೇಶದ ಸಂಸ್ಕ್ರತಿಯನ್ನು ಬೆಳೆಸಲು ಮಹಿಳೆಯರ ಕೊಡುಗೆ ಅಪಾರವಾದದ್ದು ಮಹಿಳೆಯು ತ್ಯಾಗ, ಸಹನೆ, ಮಮತೆ, ಪ್ರೀತಿ ವಾತ್ಸಲ್ಯ ಜೊತೆಲಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕೆಂದರು.

ಸಾನ್ನಿಧ್ಯ ವಹಿಸಿದ್ದ ಮುರಗೋಡದ ಶ್ರೀ ನೀಲಕಂಠ ಸ್ವಾಮೀಜಿ, ಹೆಣ್ಣು ಅಬಲೆಯಲ್ಲ, ತೊಟ್ಟಿಲು ತೂಗುವ ಕೈ, ಜಗತ್ತನ್ನೇ ತೂಗಬಲ್ಲದು ಎಂದು ಹೇಳಿದರು. ಬೈಲಹೊಂಗಲದ ಮೂರು ಸಾವಿರ ಮಠದ ಪೀಠಾಧಿಕಾರಿಗಳಾದ ಶ್ರೀ ಪ್ರಭುನೀಲಕಂಠ ಸ್ವಾಮಿಜಿ, ಹೊಸೂರ ಮಡಿವಾಳೇಶ್ವರ ಮಠದ ಶ್ರೀ ಗಂಗಾಧರ ಸ್ವಾಮಿಜಿ ಪಾವನಸಾನಿದ್ಯವಹಿಸಿದ್ದರು ಬೈಲಹೊಂಗಲದ ಪತ್ರಿಬಸವೇಶ್ವರ ಅಭಿವೃದ್ಧಿ ಸಂಘದ ಶರಣೆ ಪ್ರೇಮಾ ಅಂಗಡಿ, ಗೆಜಪತಿಯ ಶರಣೆ ಶಾರದಮ್ಮ ಅಗಸಗಿ ಮಾತನಾಡಿದರು.

ಕು. ವೈಷ್ಣವಿ ಅಂಗಡಿ, ಶ್ವೇತಾ ಅಂಗಡಿ ಪ್ರಸ್ತುತ ಪಡಿಸಿದ ಭರತ ನಾಟ್ಯ ಜನರ ಗಮನ ಸೆಳೆಯಿತು

ಈ ಸಂದರ್ಭದಲ್ಲಿ ಸಂಪಗಾಂವ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ, ಜಿ.ಪಂ ಸದಸ್ಯ ಬಸವರಾಜ ಬಂಡಿವಡ್ಡರ, ತಾ. ಪಂ ಸದಸ್ಯ ಸುರೇಶ್ ಮ್ಯಾಕಲ್, ಗ್ರಾ.ಪಂ ಅದ್ಯಕ್ಷೆ ಸಂಧ್ಯಾ ತಿವಾರಿ, ಉಪಾಧ್ಯಕ್ಷೆ ಕಲ್ಲವ್ವ ತೋರಗಲ, ಸೇರಿದಂತೆ ಅಕ್ಕನ ಬಳಗ, ಬಸವ ಮಹಾ ಮನೆಯ ಶರಣೆಯರು, ಸಂಸ್ಕೃತ ಪಾಠಶಾಲಾ ವಿದ್ಯಾರ್ಥಿಗಳು, ಸೇರಿದಂತೆ ನಾನಾ ಗಣ್ಯರು, ನೂರಾರು ಭಕ್ತರು ಪಾಲ್ಗೊಂಡಿದ್ದರು. ಧರ್ಮದರ್ಶಿಗಳಾದ ಅಶೋಕ ಶೆಟ್ಟರ, ವಿ.ಬಿ. ದೇಸಾಯಿ, ಶಂಕ್ರಯ್ಯ ಮಲ್ಲಯ್ಯನವರಮಠ ನೇತೃತ್ವ ವಹಿಸಿದ್ದರು. ಗುರುಮಾತೆ ಕಂಠಿ ನಿರೂಪಿಸಿದರು ಬಸವರಾಜ ಬ್ಯಾಳಿ ವಂದಿಸಿದರು.

ವರದಿ: ಚಿದಂಬರ ಕುರುಬರ.

Comments