UK Suddi
The news is by your side.

“ಮೇ ಭೀ ಚೌಕಿದಾರ್” ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ: ವಿರೋದಿಗಳಿಗೆ ಪಂಚ್…!!

ನವದೆಹಲಿ: ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ‘ಮೇ ಭೀ ಚೌಕಿದಾರ್’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ‘ಮೇ ಭೀ ಚೌಕಿದಾರ್’ ಅನ್ನೋ ಟ್ಯಾಗ್ಲೈನ್ ಮೂಲಕ ವಿಡಿಯೋ ಬಿಡುಗಡೆ ಮಾಡಿದ್ದು,”ನಿಮ್ಮ ಚೌಕಿದಾರ ದೃಢವಾಗಿ ನಿಂತು ದೇಶ ಸೇವೆ ಮಾಡುತ್ತಿದ್ದಾನೆ” ಅಂತ ಟ್ವೀಟ್ ಮಾಡಿದ್ದಾರೆ. ಜನ, ಸಂಸ್ಕೃತಿ, ಸೈನಿಕರು, ರೈತರು, ಕರಕುಶಲ ಕೆಲಸಗಾರರು ಹೀಗೆ ಎಲ್ಲವನ್ನೂ ವಿಡಿಯೋದಲ್ಲಿ ಸೇರಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪದೇ ಪದೇ ‘ಚೌಕೀದಾರ್ ಚೋರ್ ಹೈ’ ಅಂತ ಪ್ರಧಾನಿಯವನ್ನು ಟೀಕಿಸುತ್ತಿದ್ದು, ಅದನ್ನೇ ಅಸ್ತ್ರವಾಗಿ ಮಾಡಿ ಅದೇ ಪದವನ್ನು ಬಳಸಿ ಬಿಜೆಪಿ ಅಭಿಯಾನ ಆರಂಭಿಸಿದೆ. ಮಾರ್ಚ್ 31ರಂದು ನಡೆಯುವ ಮೇ ಭೀ ಚೌಕೀದಾರ್ ಕಾರ್ಯಕ್ರಮದಲ್ಲಿ ಎಲ್ಲರೂ ಪ್ರಧಾನಿಯವರ ಜೊತೆ ಕೈ ಜೋಡಿಸಿ ಅನ್ನೋ ಮನವಿಯ ಮೂಲಕ ವಿಡಿಯೋ ಹಾಡು ಕೊನೆಗೊಳ್ಳುತ್ತದೆ.
https://twitter.com/narendramodi/status/1106759555315314689?s=20

“ನಾನು ಒಬ್ಬಂಟಿಯಲ್ಲ. ಭ್ರಷ್ಟಾಚಾರ, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವ ಪ್ರತಿಯೊಬ್ಬರೂ ಚೌಕೀದಾರರೇ..” ಅಂತ ಪ್ರಧಾನಿ ಟ್ವೀಟ್ ಮಾಡಿದ್ದಾರೆ. ವಿಡಿಯೋದಲ್ಲಿರುವ ಸಾಲುಗಳಲ್ಲಿ ಮುದ್ರಾ ಯೋಜನೆ, ಉಜ್ವಲ ಯೋಜನೆ, ಕ್ಲೀನ್ ಇಂಡಿಯಾ ಸೇರಿ ಹಲವು ಪ್ರಧಾನಿ ಯೋಜನೆಗಳ ಹೆಸರು ಸೇರಿದೆ.

Comments