UK Suddi
The news is by your side.

ಯತ್ನಾಳ್ ವಿರುದ್ದ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ-ರಮೇಶ ಜಿಗಜಿಣಗಿ.

ವಿಜಯಪುರ:ನಮ್ಮ ಪಕ್ಷದಲ್ಲಿ ಜಿಲ್ಲೆಯಲ್ಲಿ ನನ್ನನ್ನು ಹೊರತುಪಡಿಸಿ ಯಾರು ಟಿಕೆಟ್ ಕೇಳಿಲ್ಲ,ಜಿಲ್ಲೆಯಿಂದ ಯಾರು ಟಿಕೆಟ್ ಬೇಕು ಎಂದು ಮನವಿ ಮಾಡಿಲ್ಲ,ನನ್ನ ಅರ್ಜಿಯೊಂದು ಮಾತ್ರ ಕಚೇರಿಯಲ್ಲಿದೆ, ಹೀಗಾಗಿ ನನ್ನ ಪ್ರಚಾರ ಕಾರ್ಯ ಮುಂದುವರೆಸಿದ್ದೇನೆ ಎಂದು ರಮೇಶ ಜಿಗಜಿಣಗಿ ಹೇಳಿದರು.

ವಿಜಯಪುರದಲ್ಲಿ ಮಾತನಾಡಿದ ಅವರು ಶಾಸಕ ಯತ್ನಾಳ್ ನಮ್ಮ ಪಕ್ಷದವರೇ, ಅವರೇನು ಕಾಂಗ್ರೆಸ್ಸ್ನವರಲ್ಲ,ಅವರು ಬಿಜೆಪಿಯವರು,ಬಿಜೆಪಿಯಿಂದ ಶಾಸಕ, ಸಚಿವರಾದವರು ಇದೆಲ್ಲವೂ ಅವರಿಗೆ ಗೊತ್ತು.ಯಾರಾದರೂ ರಮೇಶ್ ಜಿಗಜಿಣಗಿ ಪಕ್ಷದಲ್ಲಿ ಇದ್ದು ನೀನು ಕಾಂಗ್ರೆಸ್ಗೆ ಮತ ಹಾಕು ಎಂದರೆ ಜನ ಜಾಡಿಸಿ ಒದೆಯುತ್ತಾರೆ ಎಂದು ಯತ್ನಾಳ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments