UK Suddi
The news is by your side.

108 ಆ್ಯಂಬುಲೇನ್ಸ್ ನಲ್ಲೇ ಯಶಸ್ವಿ ಹೆರಿಗೆ: ಹೆಣ್ಣು ಮಗು ಜನನ

ವಿಜಯಪುರ: ಮಹಿಳೆಯೊಬ್ಬರು 108 ಅಂಬುಲೇನ್ಸ್ ನಲ್ಲಿ ಹಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಮುದ್ದೇಬ್ಬಿಹಾಳ ತಾಲೂಕಿನ ಗುಡದಿನ್ನಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಯಲ್ಲಕ್ಕ ಚಿಕ್ಕದಿನ್ನಿ ಎಂಬ ಮಹಿಳೆ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, 108 ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯದಲ್ಲೇ ಹೆರಿಗೆಯಾಗಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Comments