UK Suddi
The news is by your side.

ಅಧ್ಯಕ್ಷ ಉಪಾಧ್ಯಕ್ಷ ಎಂಬ ಯಾವ ಪದವಿಯೂ ಬಿಜೆಪಿಯಲ್ಲಿಲ್ಲ:ಶಾಸಕಿ ರೂಪಾಲಿ ನಾಯ್ಕ್.

ಕಾರವಾರ:ತಾಲ್ಲೂಕಿನ ಸುಂಕೇರಿಯಲ್ಲಿ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ನಾಯ್ಕ ಹಾಗೂ ಹಳಿಯಾಳ ಕ್ಷೇತ್ರದ ಮಾಜಿ ಶಾಸಕರಾದ ಸುನೀಲ್ ಹೆಗಡೆರವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು.

ಶಾಸಕಿ ರೂಪಾಲಿ ನಾಯ್ಕ್ ಮಾತನಾಡಿ ಎಂ.ಪಿ. ಗೆದ್ದರೆ ಮಾತ್ರ ನರೇಂದ್ರ ಮೋದಿಯವರು ಪ್ರಧಾನಿಯಾಗಲು ಸಾಧ್ಯ.ನಮ್ಮ ಒಂದು ಮತದಿಂದ ಏನಾಗಬಹುದು ಎಂದು ಯೋಚಿಸಬೇಡಿ ಅದೇ ಒಂದು ಮತ 1999 ರಲ್ಲಿ ವಾಜಪೇಯಿರವರನ್ನು ಕಳೆದುಕೊಂಡಾಗಿದೆ. ಅಂತಹ ಮಹಾನ್ ನಾಯಕನನ್ನು ಅಂದು ಕಳೆದುಕೊಂಡಿದ್ದೇವೆ. ಈಗ ಮತ್ತೆ ಅದೇ ತಪ್ಪು ಮಾಡುವುದು ಬೇಡ ಎಂದರು. ಕಾರ್ಯಕರ್ತರಿಂದ ಪಕ್ಷ ನಡೆಯುತ್ತಿದೆ. ಅಧ್ಯಕ್ಷ ಉಪಾಧ್ಯಕ್ಷ ಎಂಬ ಯಾವ ಪದವಿಯೂ ನಮ್ಮ ಪಕ್ಷದಲ್ಲಿಲ್ಲ.ಇಲ್ಲಿ ಕೆಳ ಸ್ಥರದಿಂದ ಪ್ರಧಾನಿಯವರೆಗೂ ಪಕ್ಷದ ಕಾರ್ಯಕರ್ತರೇ ಪ್ರತಿಒಬ್ಬರೂ ಸಮಾನರೇ ಎಂದರು. ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸಮಾಡಿ ನಮ್ಮ ಸಂಸದರನ್ನು ಗೆಲ್ಲಿಸಿ ಪ್ರಧಾನಿಗೆ ನಮ್ಮ ಕಡೆಯಿಂದ ಒಂದು ಸೀಟನ್ನು ಉಡುಗೊರೆ ನೀಡೋಣ ಎಂದರು.

Comments