UK Suddi
The news is by your side.

ಇಂದು ಸ್ವಿಪ್ ಕಾರ್ಯಕ್ರಮದಡಿ ಸೈಕಲ್ ಜಾಥಾ.

ಧಾರವಾಡ:ಲೋಕಸಭಾ ಚುನಾವಣಾ ಅಂಗವಾಗಿ ಇಂದು ಬೆಳಿಗ್ಗೆ 6.30 ಗಂಟೆಗೆ ಸ್ವಿಪ್ ಕಾರ್ಯಕ್ರಮದಡಿಯಲ್ಲಿ ಕರ್ನಾಟಕ ಕಾಲೇಜು ಆಟದ ಮೈದಾನದಿಂದ ಸುಮಾರು 400 ಜನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಸೈಕಲ್ ಜಾಥಾ ನಡೆಸಲಿದ್ದಾರೆ.

ನಗರದ ಪ್ರಮುಖ ಸ್ಥಳಗಳಲ್ಲಿ ಜಾಥಾವನ್ನು ಮಾಡಿ, ಮತದಾರರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಭಾಗವಹಿಸಿ ಮತದಾನ ಮಾಡಲು ಪ್ರೆರಣೆ ನೀಡಲಿದ್ದಾರೆ.

ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸುವರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಜಿ.ಬಿ. ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments