UK Suddi
The news is by your side.

ಇನ್ನಷ್ಟು ಕ್ಷೀಣಿಸಿದ ಗೋವಾ ಸಿಎಂ ಪರಿಕ್ಕರ್ ಆರೋಗ್ಯ.

ಪಣಜಿ:ಕಳೆದ ಕೆಲವು ತಿಂಗಳುಗಳಿಂದ ಮೇದೋಜೀರಕ ಗ್ರಂಥಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಗೋವಾ ಸಿಎಂ ಮನೋಹರ್‌ ಪರ್ರಿಕರ್‌ ಅವರ ಆರೋಗ್ಯ ಶನಿವಾರ ಮತ್ತಷ್ಟು ಗಂಭೀರವಾಗಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಗೋವಾ ಸಚಿವ ವಿಜಯ್‌ ಸರದೇಸಾಯಿ ಹಾಗೂ 5 ಮಂದಿ ಶಾಸಕರು ಪರಿಕ್ಕರ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಇದೇ ವೇಳೆ ಗೋವಾ ಬಿಜೆಪಿ ಕೋರ್‌ ಕಮಿಟಿ ಸದಸ್ಯರು ಮತ್ತು ಶಾಸಕರು ತುರ್ತು ಸಭೆ ಕರೆದು ಚರ್ಚೆ ಪರ್ರಿಕರ್‌ ಅವರ ಆರೋಗ್ಯದ ಬಗ್ಗೆ ನಡೆಸಿದ್ದಾರೆ.

ಜೊತೆಗೆ ಮುಂದೆ ಕೈಗೊಳ್ಳಬೇಕಾದ ರಾಜಕೀಯ ನಿರ್ಧಾರಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

Comments