UK Suddi
The news is by your side.

ಏ.1ರಂದು ಸಿದ್ದಗಂಗಾ ಶ್ರೀಮಠದಲ್ಲಿ ವಿನೂತನ ಕಾರ್ಯಕ್ರಮ:ಏನದು ಗೊತ್ತಾ.?

ತುಮಕೂರು:ನಡೆದಾಡುವ ದೇವರು,ತ್ರಿವಿದ ದಾಸೋಹಿ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮಿಜಿಯವರ 112ನೇ ಜನ್ಮ ದಿನಾಚರಣೆ ಕಾರ್ಯಕ್ರಮವು ಬರುವ ಏಪ್ರೀಲ್ 1 ರಂದು ಶ್ರೀಮಠದಲ್ಲಿ ನಡೆಯಲಿದೆ.

ಶ್ರೀಗಳ 112ನೇ ಜನ್ಮದಿನದ ಪ್ರಯುಕ್ತ ಉಚಿತ ಸಾಮೂಹಿಕ ನಾಮಕರಣದ ವಿನೂತನ ಕಾರ್ಯಕ್ರಮವನ್ನು ಡಾ.ಶಿವಕುಮಾರ ಸ್ವಾಮಿಜಿಯವರ ಭಕ್ತಾಧಿಗಳ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಶ್ರಿಸಿದ್ದಗಂಗಾ ಮಠದಲ್ಲಿ ನಡೆಯುವ ಜನ್ಮ ಮಹೋತ್ಸವದಲ್ಲಿ 112 ನವಜಾತ ಶಿಶುಗಳಿಗೆ ಶಿವಕುಮಾರ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಗುವುದು.ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸುವ ನವಜಾತ ಶಿಶುಗಳಿಗೆ ಉಚಿತ ತೊಟ್ಟಿಲು,ಸಿದ್ದಗಂಗಾ ಶ್ರೀಗಳ ಭಾವಚಿತ್ರ ಇರುವ ಬೆಳ್ಳಿಯ ಪದಕ,ಹೊಸ ಬಟ್ಟೆ,ಹೊಸ ಹಾಸಿಗೆ, ಮತ್ತು ಜನ್ಮ ದಿನಕ್ಕೆ ತಕ್ಕಂತೆ ಜಾತಕ ಬರೆಸಿ ಕೊಡಲಾಗುವುದು ಎಂದು ಡಾ. ಶಿವಕುಮಾರ್ ಸ್ವಾಮೀಜಿಗಳ ಭಕ್ತಾದಿಗಳ ಅಸೋಸಿಯೇಷನ್ ಅಧ್ಯಕ್ಷ ಜಯಣ್ಣ ತಿಳಿಸಿದ್ದಾರೆ.

ಈ ವಿನೂತನ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶಟ್ಟರ, ಯಡಿಯೂರಪ್ಪ ಸೇರಿದಂತೆ ಮೋದಲಾದವರು ಭಾಗವಹಿಸಲಿದ್ದಾರೆ.

ಆಸಕ್ತ ಪೋಷಕರು ಮಗುವಿನ ಜನ್ಮ ಪ್ರಮಾಣ ಪತ್ರ, ಮಗುವಿನ ಮತ್ತು ಪೋಷಕರ ಭಾವ ಚಿತ್ರ, ಹಾಗೂ ಶಿಶುವಿನ ವೈದ್ಯ ವಿವರಗಳೊಂದಿಗೆ ಮಾರ್ಚ್ 26ರ ಒಳಗಾಗಿ ನೊಂದಣಿ ಮಾಡಿಸಬೇಕು.ಹೆಚ್ಚಿನ ವಿವರಗಳಿಗೆ ಆಸಕ್ತರು
9945920484 / 9964507469 ಈ ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡಲು ಕೋರಲಾಗಿದೆ.

Comments