UK Suddi
The news is by your side.

ಗ್ರಾಮೀಣ ಪ್ರತಿಭೆಗಳಿಗಾಗಿ ಸ್ವಾತಂತ್ರ್ಯ ಹೋರಾಟಗಾರರ ಭಾಷಣ ಸ್ಪರ್ಧೆ.

ಬೈಲಹೊಂಗಲ(ಬೆಳಗಾವಿ):ತಾಲೂಕಿನ ಗೋವನಕೊಪ್ಪ ಗ್ರಾಮದ ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ (SCH ಫೌಂಡೇಶನ್) ಪ್ರತಿಷ್ಠಾನದ ಗಾಂಧಿ ಅಧ್ಯಯನ ಕೇಂದ್ರ ಗ್ರಾಮೀಣ ಪ್ರತಿಭೆಗಳಿಗಾಗಿ ಸ್ವಾತಂತ್ರ್ಯ ಹೋರಾಟಗಾರರ ಭಾಷಣ ಸ್ಪರ್ಧೆ ಏರ್ಪಡಿಸಿತ್ತು.

ಸ್ಪರ್ಧೆಯ ನಿರ್ಣಾಯಕರಾಗಿ ಮಡಿವಾಳಪ್ಪ ಗಿಡಮೂದಿ, ನ್ಯಾಯವಾದಿಗಳು, ಜಿಲ್ಲಾ ನ್ಯಾಯಾಲಯ, ಧಾರವಾಡ, ಡಾ. ಶಿವಾನಂದ ಹೊಂಗಲ, ಸಹಾಯಕ ಪ್ರಾದ್ಯಾಪಕರು, ತೋಟಗಾರಿಕಾ ಮಹಾವಿದ್ಯಾಲಯ, ಸಿರಸಿ ಮತ್ತು ಸವಿತಾ ಅನಿಕಿವಿ, ಅಥಿತಿ ಕನ್ನಡ ಶಿಕ್ಷಕಿ ಸರಕಾರಿ ಪ್ರೌಢ ಶಾಲೆ ಚಿಕ್ಕಬೆಳ್ಳಿಕಟ್ಟಿ ಇವರುಗಳು ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಕುಮಾರಿ ಅಶ್ವಿನಿ ಶಿವಾನಂದ ಅನಿಕಿವಿ ಪ್ರಥಮ, ಕುಮಾರಿ ಗಂಗಮ್ಮ ಮ. ಒಡೆಯರ ದ್ವಿತೀಯ ಮತ್ತು ಕುಮಾರಿಲಕ್ಷ್ಮಿ ಲಕ್ಕುಂಡಿ ತೃತೀಯ ಬಹುಮಾನ ಗಳಿಸಿದರು.

ಪ್ರತಿಷ್ಠಾನದ ಸ್ವಯಂ ಸೇವಕರಾದ ಸುರೇಶ ನೊರಜಪ್ಪನವರ ಸ್ವಾಗತಿಸಿದರು, ನಾಗರಾಜ ವಗ್ಗನವರ ವಂದಿಸಿದರು ಮತ್ತು ಚೇತನ ಅನಿಕಿವಿ ಕಾರ್ಯಕ್ರಮ ನಿರೂಪಿಸಿದರು.

Comments