UK Suddi
The news is by your side.

ನಾ ಹೇಗೆ ಮರೆಯಲಿ ಹಾಸ್ಟೇಲ್ ನೆನಪು..

ವಿದ್ಯಾರ್ಥಿ ಜೀವನದಲ್ಲಿ ಹಾಸ್ಟೇಲ್ ಬದುಕು ವಿಶಿಷ್ಟವಾದುದು, ಯಾಕಂದ್ರೇ ಅಲ್ಲಿಯ ಒಂದು ವಾತಾವರಣ ಗಲಾಟೆ, ಸ್ನೆಹಿತರ ಗುಂಪು, ಕುಳಿತುಕೊಂಡು ಸುಮ್ಮನೆ ಯಾವುದಾದರೊಂದು ವಿಷಯದ ಮೇಲೆ ಹರಟೆ ಹೊಡೆಯುವುದು, ಬೇರೆ ಬೇರೆ ಊರಿಂದ ಬಂದು ಒಬ್ಬರಿಗೊಬ್ಬರೂ ಪರಿಚಿತರಾಗಿ ಆತ್ಮೀಯ ಸ್ನೇಹಿತರಾಗಿ ಜಾತಿ ಭೇದ ಮರೆತು ಎಲ್ಲರೂ ಒಟ್ಟಾಗಿ ಒಂದೇ ತಟ್ಟೆಯಲ್ಲಿ ಊಟ ಮಾಡುವುದು ಆ ಒಂದು ವಿದ್ಯಾರ್ಥಿ ಜೀವನದ ಪಯಣ ಮರೆಯಲು ಸಾಧ್ಯವಿಲ್ಲ.
ನಮ್ಮ ಹಾಸ್ಟೇಲ್ ಉಳಿದ ಹಾಸ್ಟೇಲಗಿಂತ ಭಿನ್ನವಾದದ್ದು.

ಹಾಸ್ಟೇಲ್ ಎಂದರೇ ಗಲಾಟೆ ಬರೀ ಜಗಳ ಎಂಬ ಮಾತಿಗೆ ನಮ್ಮ ಹಾಸ್ಟೇಲ್ ತದ್ವಿರುದ್ಧವಾಗಿದೆ. ಇಲ್ಲಿ ಏನೇ ಸಮಸ್ಯೆ ಬಂದರೂ ಎಲ್ಲರೂ ಒಗ್ಗಟ್ಟಾಗಿ ನಿಂತು ಸಮಸ್ಯೆಯನ್ನ ಬಗೆಹರಿಸಿಕೊಳ್ಳುತ್ತೇವೆ. ಬೆಳಿಗ್ಗೆ ಎದ್ದ ಕೂಡಲೇ ಒಂದೆಡೆ ಸಂಗೀತದ ಗಾನಸುಮಧುರ ಸ್ನೇಹಿತರ ಬಾಯಿಂದ ಕೇಳಲು ಅದೆಷ್ಟು ಚಂದ, ಮುಂಜಾನೆಯಿಂದ ಸಂಜೆಯವರೆಗೂ ಕಾಲೇಜಿನಲ್ಲಿ ಪಾಠ ಕೇಳಿ ಒಂದು ಕಿಲೋ ಮಿಟರ್ ಹಾಸ್ಟೇಲಗೆ ನಡೆದುಕೊಂಡು ಒಂದು ಸುಸ್ತಾಯಿತು ಎನ್ನುವಾಗಲೇ, ಪಕ್ಕದ ರೂಮಿನಿಂದ ತಬಲಾ ಹಾರ್ಮೊನಿಯಂ ಸಂಗೀತದ ಸದ್ದು ಬೇಜಾರೆಲ್ಲಾ ತೊಡೆದುಹಾಕಿ ಮನಸ್ಸಿಗೆ ನೆಮ್ಮದಿ ಕೊಡುವಂತೆ ಒಂದಷ್ಟು ಸ್ನೆಹಿತರ ಹಾಡುಗಳು ಕೇಳುತ್ತಾ ಇದ್ದರೇ ಮನಸ್ಸಿಗೆ ಏನೋ ಒಂಥರ ಖುಷಿಯಾಗುತ್ತದೆ.

ಸ್ನೆಹಿತರ ಹುಟ್ಟು ಹಬ್ಬ ಬಂದರಂತೂ ಮುಗೀತು ಎಲ್ಲಾ ರೂಮಿಗೆ ಅಡ್ಡಾಡಿ ಎಲ್ಲಾ ಸ್ನೇಹಿತರಿಂದಲೂ ದುಡ್ಡು ಸಂಗ್ರಹಿಸಿ, ಕೇಕ್ ತೆಗೆದುಕೊಂಡು ಬಂದಿ ಸ್ನೆಹಿತರ ಹುಟ್ಟು ಹಬ್ಬ ಎಲ್ಲರೂ ಸೇರಿ ಮಾಡುವುದರಲ್ಲಿ ಸಿಗುವ ಖುಷಿ ಮಜಾನೇ ಬೇರೆ, ಬರ್ತಡೇ ಆಚರಿಸಿದ ಮೇಲೆ ಎಲ್ಲಾ ಸ್ನೇಹಿತರೂ ಸೇರಿ ಆತನಿಗೆ ಸ್ನಾನ ಮಾಡಿಸಿ ಖುಷಿ ಪಡುವುದಂತೂ ಮರೆಯಲಾಗದು.ಇಂತಹ ಸುಮಧುರ ನೆನಪುಗಳು ಹಾಸ್ಟೇಲನಲ್ಲಿ ಮಾತ್ರ ಸಿಗುತ್ತದೆ.

ಆದರೆ ಆ ಒಂದು ರಾತ್ರಿ ನನ್ನ ರೂಮೆಂಟ್ ಹುಟ್ಟು ಹಬ್ಬವೆಂದು ತಿಳಿದಿರಲಿಲ್ಲ, ಆತ ಮೇಸೆಜ್ ಮಾಡುತ್ತಾ ಇರುವಾಗ ನನ್ನ ಕೆಲವು ಸ್ನೇಹಿತರಿಗೆ ಆತನ ಹುಟ್ಟುಹಬ್ಬವೆಂದು ತಿಳಿದು ಆತನಿಗೆ ಶುಭಾಶಯ ತಿಳಿಸಲು ಬಂದಿದ್ದರು, ಅರೇ ಕ್ಷಣ ಕೂಡ ನನ್ನ ರೂಮೆಂಟ್ ಕಿರಣ ಕಮ್ಮಾರನಿಗೆ ಶುಭಾಶಯ ತಿಳಿಸಿದೆ, ಸಮಯ ಮಧ್ಯರಾತ್ರಿ 12.10 ಆಗಿತ್ತು. ನನ್ನ ಮನಸ್ಸಿನಲ್ಲಿ ಏನೊ ಒಂಥರ ಗಲಿಬಿಲಿ ಆತನ ಹುಟು ಹಬ್ಬ ಮಾಡಬೇಕಲ್ಲ ಎಂದು ಆಲೋಚನೆ ಮಾಡಿದೆ, ಕೇಕ್ ತರಬೇಕೆಂದರೇ ಅಂಗಡಿಗಳೆಲ್ಲವೂ ಮುಚ್ಚಿದ್ದವು, ಹಾಗಾಗಿ ರೂಮನಲ್ಲಿ ಇದ್ದ ರುಚಿಯಾದ ಮಾದ್ಲಿಯನ್ನೇ ಕೇಕ್ ಅಂತ ತಿಳಿದು ಎಲ್ಲಾ ಸ್ನೇಹಿತರೂ ಆತನಿಗೆ ತಿನಿಸಿ ಆತನ 23 ನೇ ವರ್ಷದ ಹುಟ್ಟು ಹಬ್ಬವನ್ನು ಸಂಭ್ರಮದಿಂದ ವಿಭಿನ್ನವಾಗಿ ಆಚರಿಸಿದೆವು.
ವಿಶೇಷವಾಗಿ ಆತನ ಹುಟ್ಟು ಹಬ್ಬವನ್ನು ಮಾದ್ಲಿ ತಿನಿಸುವ ಮೂಲಕ ಜನ್ಮ ದಿನ ಆಚರಿಸಿ ಸ್ನೆಹಿತನ ಜೊತೆಗೆ ಸಂಭ್ರಮಪಟ್ಟೆವು, ಈ ನೆನಪುಗಳು ಅಚ್ಚಳಿಯದೇ ಉಳಿದಿವೆ. ಈ ಮನಸ್ಸಿನ ಗೂಡಿನಲ್ಲಿ ಆ ಹಾಸ್ಟೇಲ್ ಜೀವನದ ತುಂಟಾಟ ಖುಷಿಯ ಕ್ಷಣಗಳು ಮರೆಯಲಾಗದು.

ಸಿದ್ರಾಮಗೌಡ, ಮಲ್ಲು ಕುಂಬಾರ, ಪ್ರಸನ್ನ ನಾಯಕ, ಪ್ರಕಾಶ, ಚನ್ನಗೌಡ ಪಾಟೀಲ್ ಇದ್ದರು.

-ಶಿವಶರಣ ಯ ಪರಪ್ಪಗೋಳ

Comments