UK Suddi
The news is by your side.

ನ್ಯೂಜಿಲೆಂಡ್ ಗುಂಡಿನ ದಾಳಿ: ಲೈವ್ ವಿಡಿಯೋ ಮಾಡಿ ಶೂಟ್ ಮಾಡಿದ.

ಕ್ರೈಸ್ಟ್ಚರ್ಚ್: ಇತ್ತೀಚೆಗೆ ನ್ಯೂಜಿಲೆಂಡ್ನಲ್ಲಿ ಮಿಲಿಟರಿ ಸಮವಸ್ತ್ರದಲ್ಲಿ ಬಂದೂಕುಧಾರಿಯೊಬ್ಬ ಮಸೀದಿಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು. ಈ ವೇಳೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳಿದ್ದ ಬಾಂಗ್ಲಾ ಕ್ರಿಕೆಟ್ ತಂಡದ ಸದಸ್ಯರು ದಾಳಿಯಿಂದ ಸುರಕ್ಷಿತವಾಗಿ ಪಾರಾಗಿದ್ದರು.

ಈ ಗುಂಡಿನ ದಾಳಿ ಕುರಿತು ಈಗ ಭಯಾನಕ ಸತ್ಯ ಒಂದು ಹೊರಬಿದ್ದಿದೆ. ನ್ಯೂಜಿಲೆಂಡ್ನ ಕ್ರೈಸ್ಟ್ಚರ್ಚ್ನ ಮಸ್ಜಿದ್ ಅಲ್ ನೂರ್ ಎಂಬ ಮಸೀದಿಯೊಂದರಲ್ಲಿ ಬಂದೂಕುಧಾರಿಯೊಬ್ಬ ಶುಕ್ರವಾರ ಬೆಳಗ್ಗೆ ಗುಂಡಿನ ದಾಳಿ ನಡೆಸಿದ್ದಾನೆ. ಮಾಹಿತಿಗಳ ಪ್ರಕಾರ ದಾಳಿಯಲ್ಲಿ 27 ಜನರು ಮೃತಪಟ್ಟಿದ್ದು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿತ್ತು ಶುಕ್ರವಾರದ ಪ್ರಾರ್ಥನೆಗಾಗಿ ದೊಡ್ಡ ಸಂಖ್ಯೆಯಲ್ಲಿ ಜನರು ಮಸೀದಿಯಲ್ಲಿ ಜಮಾಯಿಸಿದ್ದರು. ಇದರಿಂದಾಗಿ ಸಾವುನೋವು ಹೆಚ್ಚಾಗುವ ಸಾಧ್ಯತೆ ಇತ್ತು

ಇನ್ನು ದಾಳಿಕೋರ ನ್ಯೂಜಿಲೆಂಡ್ನ ಯಾವುದೇ ಮಸೀದಿಗೆ ಭೇಟಿ ನೀಡದಂತೆ ಪ್ರಾರ್ಥನಾಕಾರರಿಗೆ ವಾರ್ನ್ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ದಾಳಿಯು ನ್ಯೂಜೆಲೆಂಡ್ ಪಾಲಿಗೆ ನಿರಂತರ ಕರಾಳ ದಿನವಾಗಿ ಪರಿಣಮಿಸಿರುವುದಾಗಿ ಅಲ್ಲಿನ ಪ್ರಧಾನಿ ಜಸಿಂತಾ ಅರ್ಡೆನ್ ಪ್ರತಿಕ್ರಿಯಿಸಿದ್ದಾರೆ.

ಬಾಂಗ್ಲಾ ಕ್ರಿಕೆಟ್ ತಂಡ ಪಾರು:

ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ಸದ್ಯ ಕ್ರೈಸ್ಟ್ಚರ್ಚ್ನಲ್ಲಿ ಪಂದ್ಯ ಆಡಬೇಕಿತ್ತು. ಈ ಹಿನ್ನೆಲೆಯಲ್ಲಿ ತಂಡವು ಹೋಟೆಲ್ನಲ್ಲಿ ತಂಗಿತ್ತು. ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ತಂಡ ಇದೇ ಮಸೀದಿಗೆ ತೆರಳಿತ್ತು. ಆದರೆ, ಗುಂಡಿನ ದಾಳಿ ಆರಂಭವಾಗುತ್ತಲೇ ರಕ್ಷಣಾ ಕಾರ್ಯಾಚರಣೆಗೆ ಮುಂದಾದ ಪೊಲೀಸರು ಇಡೀ ತಂಡವನ್ನು ರಕ್ಷಿಸಿದ್ದಾರೆ.

ಈ ದಾಳಿಯ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಶಾಲೆಗಳನ್ನು ಬಂದ್ ಮಾಡಲಾಗಿತ್ತು ಇಡೀ ನ್ಯೂಜೆಲೆಂಡ್ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು

Comments