UK Suddi
The news is by your side.

ಪಕ್ಷಿಗಳಿಗೆ ನೀರುಣಿಸಲು ರೆಡಿಯಾದ್ರು ಮುದಕವಿ ಯುವಕರು.

ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ:ಜಗದಾತ್ಮಾನಂದ ಶ್ರೀ
ರಾಮದುರ್ಗ(ಬೆಳಗಾವಿ):ಮನುಷ್ಯನಂತೆ ಪ್ರಾಣಿಗಳಿಗೂ ಜೀವಿಸುವ ಹಕ್ಕು ಇದ್ದು, ಅವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಶ್ರೀಪತಿ ನಗರ ಸಿದ್ಧಾರೂಢ ಮಠದ ಶ್ರೀ ಜಗದಾತ್ಮಾನಂದ ಸ್ವಾಮಿಜಿ ಹೇಳಿದರು.

ತಾಲೂಕಿನ ಮುದಕವಿ ಗ್ರಾಮದಲ್ಲಿ ಇತ್ತೀಚೆಗೆ ಪ್ರೆಂಡ್ಸ್ ಗ್ರುಪ್ ಮುದುಕವಿ ತಂಡದ ಸದಸ್ಯರು ಬೇಸಿಗೆ ಕಾಲದಲ್ಲಿ ಪಕ್ಷಿಗಳಿಗೆ ನೀರು ಉಣಿಸುವದಕ್ಕಾಗಿ ತೊಟ್ಟಿಗಳಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮುದಕವಿ ಗ್ರಾಮದ ಸುತ್ತಲೂ ಗುಡ್ಡಗಳಿಂದ ಕೂಡಿಕೊಂಡಿದೆ. ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಸೃಷ್ಟಿಯಾಗುವುದನ್ನು ಅರಿತ ಇಲ್ಲಿನ ಯುವಕರು ಪಕ್ಷಿಗಳಿಗೆ ನೀರು ಉಣಿಸುವ ಮೂಲಕ ಮೂಕ ಪ್ರಾಣಿಗಳ ಮೇಲಿನ ಕಳಕಳಿ ತೋರಿಸುತ್ತದೆ ಎಂದು ಶ್ರೀಗಳು ಹೇಳಿದರು.

ನಿಮ್ಮ ಸೇವಾ ಕಾರ್ಯಗಳು ಹೀಗೆ ಮುಂದುವರಿಯಲಿ.ಇತರರಿಗೂ ಮಾದರಿಯಾಗಲಿ ಎಂದು ಶ್ರೀಗಳು ಆಶಿಸಿದರು. ಅರಣ್ಯ ಇಲಾಖೆಯ ಬೈಲಪ್ಪ ಪೆಂಟಿ ಅವರು ಯುವಕರ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ರಾಮದುರ್ಗ ಕಲ್ಚರಲ್ ಟ್ರಸ್ಟ್ ಸದಸ್ಯ ರಾಮಚಂದ್ರ ಯಾದವಾಡ, ಗ್ರಾಮದ ಜೀವಪ್ಪ ಕಡ್ಡಿ, ಉಮೇಶ ಏಣಿ, ಯೋಧ ಶರಣು, ರಾಜು ದಳವಾಯಿ, ಚಿದಾನಂದ ರಕ್ಷಿ, ವಹೀದ ಖಾಜಿ, ರುದ್ರಪ್ಪ, ಮಂಜುನಾಥ, ಬಸು, ಶಶಿಕಾಂತ, ರವಿ, ಸುರೇಶ ಮತ್ತು ಫ್ರೆಂಡ್ಸ್ ಗ್ರುಪ್ ಮುದಕವಿ ಸದಸ್ಯರು ಹಾಜರಿದ್ದರು.

Comments