UK Suddi
The news is by your side.

ಪ್ರೀತಿಗಾಗಿ ಪೀಠ ತ್ಯಜಿಸಿ,ಗೆಳತಿಯೊಡನೆ ಕೇಕ್ ಕತ್ತರಿಸಿದ ಸ್ವಾಮೀಜಿ.

ಕೊಪ್ಪಳ:ಸನ್ಯಾಸತ್ವ ಸ್ವೀಕರಿಸಿದ್ದ ಸ್ವಾಮೀಜಿಯೊಬ್ಬರು ಪ್ರೀತಿಪ್ರೇಮದ ವ್ಯಾಮೋಹಕ್ಕೆ ಸಿಲುಕಿ ಪೀಠತ್ಯಾಗ ಮಾಡಿದ್ದಲ್ಲದೆ ಅವರ ಗೆಳತಿಯೊಡನೆ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುವ ಮೂಲಕ ಸುದ್ದಿಯಾದ ಘಟನೆ ನಡೆದಿದೆ.

ಹೌದು,ಅವರೇ ಕೊಪ್ಪಳದ ಅಳವಂಡಿ ಗ್ರಾಮದ ಸಿದ್ದೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ.ಪ್ರೀತಿಯ ಬಲೆಗೆ ಬಿದ್ದು ಪೀಠತ್ಯಾಗ ಮಾಡಿದ ಸ್ವಾಮೀಜಿ.ಕಳೆದ ಜನವರಿಯಿಂದ ಪೀಠತ್ಯಾಗ ಮಾಡಿ ಎಲ್ಲಿಯೂ ಕಾಣಿಸಿಕೊಳ್ಳದೆ ನಾಪತ್ತೆಯಾಗಿದ್ದರು.ಆದರೆ ಇದೀಗ ಅಚಾನಕ್ಕಾಗಿ ತಮ್ಮ ಗೆಳತಿಯೊಡನೆ ಸೇರಿ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸಂಭ್ರಮಸುತ್ತಿರುವ ಫೋಟೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಹಿನ್ನೆಲೆ:ಮುಂಡರಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ವಾಮೀಜಿ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಸ್ನೇಹ ಬೆಳೆಸಿದ್ದಾರೆ.ಬಳಿಕ ಅದೇ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಇದಾದ ನಂತರ ಸ್ವಾಮೀಜಿ ಆ ವಿದ್ಯಾರ್ಥಿನಿಗಾಗಿ ಪೀಠತ್ಯಾಗ ಮಾಡಿ ನಾಪತ್ತೆಯಾಗಿದ್ದರು.

ಮಠದ ಭಕ್ತರು ಮಠಕ್ಕೆ ತೆರಳಿ ಸ್ವಾಮೀಜಿಗಳು ಎಲ್ಲಿ ಎಂದು ಪ್ರಶ್ನಿಸಿದಾಗ ಮಠದ ಆಡಳಿತ ಮಂಡಳಿಯವರು “ಸ್ವಾಮೀಜಿ ವೈಯುಕ್ತಿಕ ಕಾರಣದಿಂದ ಪೀಠತ್ಯಾಗ ಮಾಡಿದ್ದಾರೆ” ಎಂದು ಹೇಳಿ ಸುಮ್ಮನಾಗಿದ್ದರಂತೆ.ಇದಾದ ಮೂರು ತಿಂಗಳ ಬಳಿಕ ಇದೀಗ ಪೀಠ ತ್ಯಾಗ ಮಾಡಿದ್ದ ಸ್ವಾಮೀಜಿ ಹಾಗೂ ಯುವತಿ ಜೊತೆ ಜೊತೆಗೆ ಹುಟ್ಟುಹಬ್ಬದ ಕೇಕ್ ಕತ್ತರಿಸುತ್ತಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

Comments