UK Suddi
The news is by your side.

ಬಸವಧರ್ಮ ನೂತನ ಪೀಠಾಧ್ಯಕ್ಷರಾಗಿ ಮಾತೆ ಗಂಗಾದೇವಿ.

ಬಾಗಲಕೋಟೆ:ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಶ್ರೀ ಮಾತೆ ಮಹಾದೇವಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಬಸವ ಧರ್ಮಪೀಠಕ್ಕೆ ನೂತನ ಪೀಠಾಧ್ಯಕ್ಷರನ್ನಾಗಿ ಮಾತೆ ಗಂಗಾದೇವಿ ಹೆಸರನ್ನು ಘೋಷಣೆ ಮಾಡಲಾಗಿದೆ.

ಹರಗುರುಚರ ಮೂರ್ತಿ ಹಾಗೂ ಚಿತ್ರದುರ್ಗ ‌ಮುರುಘಾಶರಣರ ಸಮ್ಮುಖದಲ್ಲಿ ಮಾತೆ ಗಂಗಾದೇವಿ ಹೆಸರನ್ನ ಘೋಷಣೆ ಮಾಡಲಾಗಿದೆ. ಲಿಂಗೈಕ್ಯ ಮಾತೆ ಮಹಾದೇವಿಯವರ ತತ್ವ ಸಿದ್ಧಾಂತಗಳನ್ನ ಮುನ್ನಡೆಸಿಕೊಂಡು ಹೋಗಲಿದ್ದಾರೆ.

ಇತ್ತೀಚೆಗಷ್ಟೇ ಬಸವಧರ್ಮ ಪೀಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಮಾತೆ ಮಹಾದೇವಿ ಅವರು ಲಿಂಗೈಕ್ಯರಾಗಿದ್ದರು.

Comments