UK Suddi
The news is by your side.

ಮತದಾನ ಜಾಗೃತಿ ಗೀತೆಗಳ ಝೇಂಕಾರ.

ಬಾದಾಮಿ(ಬಾಗಲಕೋಟೆ):ಬಾದಾಮಿ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು,ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕದ ಅಧ್ಯಕ್ಷರು, ಹಾಗೂ ಸಾಹಿತಿಗಳಾದ ರವಿ ಕಂಗಳ ಅವರು ಮತದಾನ ಜಾಗೃತಿ ಕುರಿತು ಗೀತೆಗಳನ್ನು ರಚಿಸಿ,ಹಾಡುವ ಮೂಲಕ ಜನ ಸಾಮಾನ್ಯರಲ್ಲಿ ಸದ್ದಿಲ್ಲದೆ ಮತದಾನದ ಮಹತ್ವವನ್ನು ತಿಳಿಸುತ್ತ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಬಾಗಲಕೋಟ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸನ್ಮಾನ್ಯ ಶ್ರೀಮತಿ ಗಂಗೂಬಾಯಿ ಮಾನಕರ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರವಿ ಕಂಗಳ ಅವರು ಹಾಡಿದ ಮೂರು ಆಡಿಯೋ ಹಾಗೂ ವಿಡಿಯೋಗಳನ್ನು ಬಿಡುಗಡೆಗೊಳಿಸಿದರು.
ಶಿಕ್ಷಣಾಧಿಕಾರಿಗಳಾದ ಶ್ರೀ‌ ಅಶೋಕ‌ ಬಸಣ್ಣವರ, ಸಾಹಿತಿ ಹಾಗೂ ವ್ಯಂಗ್ಯ ಚಿತ್ರಕಾರ ವೆಂಕಟೇಶ ಇನಾಮದಾರ ಉಪಸ್ಥಿತರಿದ್ದರು.
ಯಟೂಬ್ ನಲ್ಲಿ ಮತದಾನ ಜಾಗೃತಿ ಗೀತೆಗಳನ್ನು ಕೇಳಲು ಈ ಕೆಳಗಿನ ಲಿಂಕ್ ಬಳಸಿಕೊಂಡು ಮೂರು ವಿಡಿಯೊ ವೀಕ್ಷಿಸಬಹುದು.

Comments