UK Suddi
The news is by your side.

ರಬಕವಿ-ಬನಹಟ್ಟಿ: ಗಬ್ಬೆದ್ದು ನಾರುತಿದೆ ಸಾರ್ವಜನಿಕ ಶೌಚಾಲಯ, ಕ್ರಮಕ್ಕೆ ಸ್ಥಳೀಯರ ಆಗ್ರಹ.

ರಬಕವಿ-ಬನಹಟ್ಟಿ: ಪಟ್ಟಣದ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಹತ್ತಿರ ನಿರ್ಮಿಸಿರುವ ಶೌಚಾಲಯ ಮಲೀನತೆಯಿಂದ ಕೂಡಿದ್ದು ಗಬ್ಬು ನಾರುತ್ತಿದೆ ಇತ್ತಿಚಿಗೆ ಶೌಚಾಲಯದ ಹತ್ತಿರ ನಿರೂಪಯುಕ್ತ ಮಣ್ಣು ಸುರುದಿದ್ದು ಶೌಚಕ್ಕೆ ಬಳಕೆಯಾದ ನೀರು ಹರಿಯದೇ ನಿಂತುಕೊಂಡಿದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ಅಲ್ಲದೇ ಕಸ ವಿಲೇವಾರಿಯನ್ನು ಸಹ ಹತ್ತಿರದಲ್ಲಿಯೇ ಮಾಡುತ್ತಿದ್ದು ಕೊಳಚೆ ಮಡುಗಟ್ಟುತ್ತಿದೆ ಮಂಗಳವಾರ ಪೇಟೆ ವ್ಯಾಪಾರಸ್ಥರಿಗೆ ಇದೊಂದೇ ಮೂತ್ರಾಲಯವಿದ್ದು ಬೇರೆ ವಿಧಿಯಿಲ್ಲದೇ ಇದನ್ನೇ ಬಳಸುವುದು ಅನಿವಾರ್ಯವಾಗಿದೆ.

ಕಾರಣ ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನ ಹರಿಸಿ ಸುಸಜ್ಜಿತ ಶೌಚಾಲಯ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Comments