UK Suddi
The news is by your side.

ರೈತರ ಸಮಸ್ಯ ಪರಿಹರಿಸದಿದ್ದರೆ ಚುನಾವಣೆ ಬಹಿಷ್ಕಾರ.

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ರೈತರು ಹಲವಾರು ಸಮಸ್ಯಗಳನ್ನು ಎದುರಿಸುತ್ತಿದ್ದು ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸಬೇಕಿದೆ ಎಂದು ರೈತ ಮುಖಂಡ ಸಿದ್ದಗೌಡ ಮೋದಗಿ ಹೇಳಿದ್ದಾರೆ.

ಬೆಳಗಾವಿ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡ ಉತ್ತರ ಕರ್ನಾಟಕ ರೈತ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಳಸಾ ಬಂಡೂರಿ ಮಹದಾಯಿ ಯೋಜನೆ ಜಾರಿಗೆ ತರಬೇಕು.

ಕಬ್ಬು ಬೆಳೆಗಾರರ ಬಾಕಿ ಬಿಲ್ ನೀಡುವುದು ಹಾಗೂ ಖಾನಾಪೂರ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿ ಆಗಿದ್ದು ಅದನ್ನು ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ರೈತ ಮುಖಂಡರು ಆಗ್ರಹಿಸಿದರು.

ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ರೈತರ ಸಮಸ್ಯೆಗಳನ್ನು ಸರ್ಕಾರ ಕಡೆಗಣಿಸುತ್ತಿದೆ ಮೇಕೆದಾಟು ಯೋಜನೆಗೆ ಅನುದಾನ ಬಿಡುಗಡೆ.ಮಆಡುತ್ತದೆ ಆದರೆ ಐವತ್ತು ವರ್ಷಗಳಿಂದ ಹೋರಾಟ ನಡೆಯುತ್ತಿರುವ ಕಳಸಾ ಬಂಡುರಿ ಸರಕಾರದ ಕಣ್ಣಿಗೆ ಕಾನುತ್ತಿಲ್ಲ, ಕಾವೇರಿ ಹೋರಾಟಗಾರರ ಮೇಲಿನ ಕೇಸ್ ವಾಪಸ ತೆಗೆದುಕೊಳ್ಳುವಂತೆ ಹೇಳುವ ಈ ಸರಕಾರಕ್ಕೆ ಮಹದಾಯಿ ಹೋರಾಟಗಾರರ ಹಗ್ಗೆ ಗಮನವಿಲ್ಲ ಇದೆಲ್ಲವನ್ನು ನೋಡಿದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉತ್ತರ ಕರ್ನಾಟಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಅನ್ನಿಸುತ್ತಿದ್ದ ನಮ್ಮೆಲ್ಲ ಸಮಸ್ಯೆಗಳನ್ನು ಪರಾಹರಿಸಿಕೊಳ್ಳಲು ಉತ್ತರದ ಹನ್ನೆರಡು ಜಿಲ್ಲೆಯ ರೈತ ಮುಖಂಡರು ಇಂದು ಸಭೆ ಸೇರಿದ್ದೇವೆ
ಸಭೆಯ ಬಳಿಕ ಕಣಕುಂಬಿಯ ಕಳಸಾ ಬಂಡೂರಿ ವೀಕ್ಷಿಣೆಗೆ ಹೋಗಲು ರೈತರು ಮುಂದಾದರು ಕಳಸಾ ಬಂಡೂರಿ ಗೋಡೆ ವಿಕ್ಷಣೆಗೆ ರೈತರು ಹೋಗದಂತೆ ಮನವಲಿಸಲು ಪೋಲಿಸರು ಮುಂದಾದರು ಇಬ್ಬರ ನಡುವೆಯು ಚರ್ಚೆಗಳು ನಡೆದು ಬಳಿಕ ಶಾಂತ ರೀತಿಯಲ್ಲಿ ವೀಕ್ಷಣೆ ಮಾಡಲು ಅನುಮತಿಯನ್ನು ಪಡೆದುಕೊಂಡು ರೈತರು ಕಣಕುಂಬಿಗೆ ಹೋದರು

Comments