UK Suddi
The news is by your side.

ವಿಜ್ರಭಂಣೆಯಿಂದ ಜರುಗಿದ ಶ್ರೀ ಮಹಾಂತ ಶಿವಯೋಗಿಗಳ ಮಹಾರಥೋತ್ಸವ.

ಮುರಗೋಡ: ನಡೆದಾಡುವ ದೇವರೆಂದೇ ಮನೆ ಮಾತಾಗಿರುವ ಸ್ಥಳೀಯ ದುರದುಂಡೀಶ್ವರ ಮಠದ ಪವಾಡ ಪುರುಷ, ಪರಮ ತಪಸ್ವಿ ಶ್ರೀ ಮಹಾಂತ ಶಿವಯೋಗಿಗಳ 47ನೇ ವಾರ್ಷಿಕ ಪುಣ್ಯಸ್ಮರಣೆ ಮತ್ತು ಜಾತ್ರಾ ಮಹೋತ್ಸವ ನಿಮಿತ್ತ ಮಹಾರಥೋತ್ಸವ ರವಿವಾರ ಸಂಜೆ ವಿಜ್ರಭಣೆಯಿಂದ ನಡೆಯಿತು.

ಮಹಾಂತಜ್ಜನ ಮಠದ ಎದುರು ಆರಂಭಗೊಂಡ ರಥೋತ್ಸವ ನಂದಿಕೋಲು ಹಾಗೂ ಸಕಲ ವಾದ್ಯ ಮೇಳದೊಂದಿಗೆ ನಾಗರಬಾವಿ ರಸ್ತೆಯ ಉಳವಿ ಕಡೆಬಾಗಿಲದವರೇಗೂ ಸಾಗಿತು ಕೇದಿಗೆ, ಸೇವಂತಿಗೆ, ಮಲ್ಲಿಗೆ, ಗುಲಾಬಿ, ಕನಕಾಂಬರ, ಜಾಜಿ ಹಾಗೂ ನಾನಾ ಬಗೆಯ ಹೂವುಗಳು, ನಾನಾ ಬಗೆಯ ಭವ್ಯ ಹೂಮಾಲೆಗಳು, ಬಾಳೆದಿಂಡು, ತೆಂಗಿನ ಗರಿಗಳಿಂದ ಅಲಂಕೃತಗೊಂಡ ರಥ ಭಕ್ತರ ಮನ ಸೂರೆಗೊಂಡಿತು, ಮಹಾರಥೋತ್ಸವ ಸಂದರ್ಭದಲ್ಲಿ ಸುತ್ತಲಿನ 55 ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು ದಾರಿಯುದ್ದಕ್ಕೂ ಮಹಾಂತ ಅಜ್ಜನವರಿಗೆ ಜಯವಾಗಲಿ ಎನ್ನುವ ಜಯಘೋಷ ಮೋಳಗಿತ್ತು.

ಸ್ಥಳೀಯ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಂಡ್ಯ ಜಿಲ್ಲೆ ಬೇಬಿಗ್ರಾಮ ತ್ರೀನೆತ್ರ ಮಹಾಂತ ಸ್ವಾಮೀಜಿ, ಉಪ್ಪಿನ ಬೆಟಗೇರಿ ರುದ್ರಮುನಿಶ್ವರ ಮಠದ ಅಭಿನವ ರುದ್ರಮುನಿ ಸ್ವಾಮೀಜಿ, ಹೊಸಳ್ಳಿ ಸಂಸ್ಥಾನ ಮಠದ ಅಭಿನವ ಬೂದೀಶ್ವರ ಸ್ವಾಮೀಜಿ, ಕಮತಗಿ ಹೋಳೆಹುಚ್ಚೆಶ್ವರ ಮಠದ ಹುಚ್ಚೆಶ್ವರ ಸ್ವಾಮೀಜಿ, ರಾಮದುರ್ಗ ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ, ಬೈಲಹೊಂಗಲದ ಮೂರು ಸಾವಿರ ಮಠದ ಪ್ರಭುನೀಲಕಂಠ ಸ್ವಾಮಿಜಿ, ಹತ್ತರಗಿ ಕಾರೀಮಠ ಗುರುಸಿದ್ದ ಸ್ವಾಮೀಜಿ, ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಹಾವನೂರ ಶಿವಕುಮಾರ ಸ್ವಾಮೀಜಿ, ಸುಣಧೋಳಿ ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ನೇತತ್ವ ವಹಿಸಿದ್ದರು. ಚಿಮಡ ವಿರಕ್ತಮಠದ ಪ್ರಭು ಸ್ವಾಮೀಜಿ, ಕುಂದರಗಿ ಅಮರೇಶ್ವರ ದೇವರು, ಕಟಕೋಳ ಸಚ್ಚಿದಾನಂದ ಸ್ವಾಮೀಜಿ, ಬೆಂಡವಾಡ ರೇವಣಸಿದ್ದೆಶ್ವರ ಮಠದ ಗುರುಸಿದ್ದ ಸ್ವಾಮೀಜಿ, ಮತ್ತು ನಾನಾ ಗ್ರಾಮ, ಪಟ್ಟಣದ ಹರ-ಗುರು-ಚರ ಮೂರ್ತಿಗಳು ಹಾಗೂ ಶ್ರೀಮಠದ ಧರ್ಮದರ್ಶಿಗಳು, ಅಕ್ಕನ ಬಳಗ, ಬಸವ ಮಹಾ ಮನೆಯ ಶರಣೆಯರು, ಸಂಸ್ಕೃತ ಪಾಠಶಾಲಾ ವಿದ್ಯಾರ್ಥಿಗಳು, ಸೇರಿದಂತೆ ನಾನಾ ಗಣ್ಯರು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ಜಾತ್ರೆ ಪ್ರಯುಕ್ತ ಮಹಾಂತ ಶಿವಯೋಗಿಗಳ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ, ಸಹಸ್ರ ಬಿಲ್ವಾರ್ಚನೆ, ಪುಷ್ಪರ್ಚನೆ, ಮಹಾ ಮಂಗಳಾರತಿ, ನೇವೈದ್ಯ, ತೀರ್ಥಪ್ರಸಾದ ವಿತರಣೆ, ಭಜನೆ, ಸಾಮೂಹಿಕ ವಿವಾಹ, ಮಹಾಪ್ರಸಾದ ವಿತರಣೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ವರದಿ: ಚಿದಂಬರ ಕುರುಬರ

Comments