UK Suddi
The news is by your side.

ಶಸ್ತಾಸ್ತ್ರ ಆಯುಧ ಪ್ರದರ್ಶನ ನಿಷೇಧ.

ಧಾರವಾಡ:ಸಾರ್ವತ್ರಿಕ ಲೋಕಸಭಾ ಚುನಾವಣೆಯ ನಿಮಿತ್ತ ಧಾರವಾಡ ಜಿಲ್ಲೆಯಲ್ಲಿ ವಿವಿಧ ಬಗೆಯ ಶಸ್ತಾಸ್ತ್ರಗಳನ್ನು ಹೊಂದಿದ ಯಾವತ್ತೂ ಶಸ್ತಾಸ್ತ್ರ ಪರವಾನಿಗೆದಾರರು ಚುನಾವಣಾ ಅವಧಿಯಲ್ಲಿ ಚುನಾವಣೆ ಘೋಷಣೆಯಾದ ದಿನಾಂಕ ಮಾರ್ಚ್ ೧೦, ೨೦೧೯ ರಿಂದ ಮೇ ೨೭, ೨೦೧೯ ರವರೆಗೆ ಶಸ್ತಾಸ್ತ್ರದೊಂದಿಗೆ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ.

ಯಾವುದೇ ವ್ಯಕ್ತಿ ಅಥವಾ ಗುಂಪು ಚುನಾವಣಾ ಸಭೆ, ರ‍್ಯಾಲಿಗಳಲ್ಲಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಯ ಪರವಾಗಿ ಶಸ್ತಾಸ್ತ್ರ ಆಯುಧಗಳನ್ನು ಪ್ರದರ್ಶಿಸುವುದನ್ನು ಪ್ರತಿಬಂಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನವಣಾಧಿಕಾರಿಗಳೂ ಆಗಿರುವ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.

Comments