UK Suddi
The news is by your side.

ಸೋಮವಾರ ಟ್ರಾಫಿಕ್ ನಲ್ಲಿ ಬಾರಿ ಬದಲಾವಣೆ: ಸಾರ್ವಜನಿಕರ, ಗಮನಕ್ಕೆ!

ಬೆಳಗಾವಿ: ದೇಶದ ಘನತೆವೆತ್ತ ಉಪರಾಷ್ಟ್ರಪತಿ ಸೋಮವಾರ ಬೆಳಗಾವಿಗೆ ಆಗಮಿಸುವ ಹಿನ್ನಲೆಯಲ್ಲಿ ನಗರ ಪೊಲೀಸರು ಟ್ರಾಫಿಕ್ ಮಾರ್ಗದರ್ಶಿ ಹೊರಡಿಸಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೊಂದಿಗೆ ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಇತರ ಗಣ್ಯರು ಆಗಮಿಸಲಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಟ್ರಾಫಿಕ್ ನಿರ್ಬಂಧಿಸಿ, ಮಾರ್ಗ ಬದಲಾಯಿಸಿ ಸಿಟಿ ಮ್ಯಾಜಿಸ್ಟ್ರೇಟ್ ಲೊಕೇಶಕುಮಾರ ಆದೇಶ ಹೊರಡಿಸಿದ್ದಾರೆ.

ಟ್ರಾಫಿಕ್ ಮಾರ್ಗದರ್ಶಿ ದಿನದ ಮಟ್ಟಿಗೆ:

1) ಸಾಂಬ್ರಾ ಅಂಡರ್ ಬ್ರಿಡ್ಜ್, ಮಹಾಂತೇಷ ನಗರ ಅಂಡರ್ ಪಾಸ್, ಅಶೋಕ ಪಿಲ್ಲರ್ ಮೂಲಕ ಆಗಮಿಸುವ ತರಕಾರಿ ತುಂಬಿದ ವಾಹನಗಳು ಅಲಾರವಾಡ ಅಂಡರ್ ಪಾಸ್, ಯಡಿಯೂರಪ್ಪ ಮಾರ್ಗದ ಮೂಲಕ ಸಂಚರಿಸುವುದು.

2)ಗೋವಾದಿಂದ ಬರುವ ಎಲ್ಲ ಸಾರಿಗೆ ಸಂಸ್ಥೆಯ ಬಸ್ಸುಗಳು ಪೀರಣವಾಡಿ ನಾಕಾ ಬಳಿಯೇ ನಿಲುಗಡೆ ಮಾಡಿ ಅಲ್ಲಿಂದಲೇ ಗೋವಾಕ್ಕೆ ಹಿಂದಿರುಗುವುದು.

3)ಕೊಲ್ಲಾಪುರ, ಗೋಕಾಕ ಮತ್ತು ಧಾರವಾಡ ಕಡೆಯಿಂದ ಬರುವ ಬಸ್ಸುಗಳು ಅಶೋಕ ನಗರದ Four Lane ಮೇಲಿನ ಪಕ್ಕದ ಖಾಕಿ ರಸ್ತೆ ಮೇಲೆ ನಿಲ್ಲತಕ್ಕದ್ದು. ಜತೆಗೆ ಸಿಬಿಟಿ ಬಸ್ಸುಗಳೂ ಸಹ ಧರ್ಮನಾಥ ಸರ್ಕಲ್ ಬಳಿ ಕಾರ್ಯಾಚರಣೆ ಮಾಡುವುದು.

4)ಭಾನುವಾರ ಬೆಳಿಗ್ಗೆ 7 ರಿಂದ ಸೋಮವಾರ ಸಂಜೆ 8 ರವರೆಗೆ ನಗರದಲ್ಲಿ ಎಲ್ಲ ದಿಕ್ಕುಗಳಿಂದ ಆಗಮಿಸುವ ಭಾರಿ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.

5) ಗೋವಾ- ಖಾನಾಪುರ ವಾಹನಗಳು ದೇಸೂರಲ್ಲಿ ತಿರುಚಿಕೊಂಡು ಕೆ. ಕೆ. ಕೊಪ್ಪ ಬಳಿ ರಾಷ್ಟ್ರೀಯ ಹೆದ್ದಾರಿ ಸೇರವುದು.

6)ಸೋಮವಾರ ಬೆಳಿಗ್ಗೆ 8ರಿಂದ ಉಪರಾಷ್ಟ್ರಪತಿ ನಿರ್ಗಮಿಸುವವರೆಗೂ ಗೋಗಟೆ ಸರ್ಕಲ್ ನೂತನ ಬ್ರಿಡ್ಜ್ ಬಂದ್ ಆಗಲಿದ್ದು, 1st Gate ಮತ್ತು 2nd Gate ಸಂಪೂರ್ಣ ಬಂದ್ ಮಾಡಲಾಗುತ್ತದೆ. ಕಪಿಲೇಶ್ವರ ಮತ್ತು ಹಳೆ ಪಿಬಿ ರಸ್ತೆ ಬ್ರಿಡ್ಜ್ ಉಪಯೋಗಿಸಬೇಕು.

7)ನಗರದಲ್ಲಿ ಯಾವ ರಸ್ತೆಯಲ್ಲಿಯೂ ಪಾರ್ಕಿಂಗ್ ಸಂಪೂರ್ಣ ನಿಷೇಧಿಸಲಾಗಿದೆ. ಬಾಕ್ಸೈಟ್ ರೋಡ್ ಇಲ್ಲವೇ ಅಲಾರವಾಡ ರಸ್ತೆಯೆಡೆಗೆ ಹೋಗುವುದು.

8)ಬಾಗಲಕೋಟ, ಬಿಜಾಪುರ, ಯರಗಟ್ಟಿ, ನೇಸರಗಿ ಕಡೆಯಿಂದ ಬರುವ ವಾಹನಗಳು ಮಾರಿಹಾಳ ಪೊಲೀಸ್ ಠಾಣೆ ಪಕ್ಕವೇ ತಿರುಗಿಸಿ ಸುಳೇಭಾವಿ ಮೂಲಕ ಗೋಕಾಕ ರಸ್ತೆ ಸೇರಿಕೊಳ್ಳಬೇಕು.

9)ಟ್ರಾಫಿಕ್ ಜಂಜಾಟಕ್ಕೆ ಸಿಗದೇ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಬೆಳಗಿನ 8:30ಕ್ಕೆ ಪರೀಕ್ಷಾ ಕೊಠಡಿ ಸೇರುವಂತೆ ಅವರ ಪಾಲಕರು ಕ್ರಮ ವಹಿಸಬೇಕು ಎಂದು ಕಮಿಷ್ನರ್ ಲೊಕೇಶಕುಮಾರ ತಿಳಿಸಿದ್ದಾರೆ.

ಮೇಲ್ಕಾಣಿಸಿದ ಸಂಚಾರ ಮಾರ್ಗವನ್ನು ಪಾಲಿಸಿ ಸಹಕರಿಸಲು ಕಮಿಷ್ನರ್ ಮನವಿ ಮಾಡಿದ್ದಾರೆ.

Comments