UK Suddi
The news is by your side.

ಹಿರೇಹಳ್ಳದ ಪುನಶ್ಚೇತನಕ್ಕೆ 3,44.431 ರೂಪಾಯಿ ದೇಣಿಗೆ ನೀಡಿದ ಪ್ರಾಥಮಿಕ ಶಾಲಾ ಶಿಕ್ಷಕರು.

ಕೊಪ್ಪಳ: ಶ್ರೀ ಗವಿಮಠದ ಪೂಜ್ಯ ಶ್ರೀಗಳು ಕೈಗೊಂಡಿರುವ ಅತ್ಯಮೂಲ್ಯವಾದ ಜನ ಉಪಯೋಗಿ ಹಿರೇಹಳ್ಳದ ಪುನಶ್ಚೇತನ ಕಾರ್ಯಕ್ರಮಕ್ಕೆ ಕೊಪ್ಪಳ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು 3,44.431 ರೂಪಾಯಿಗಳನ್ನು ಸಂಗ್ರಹಿಸಿ ( ಮೂರು ಲಕ್ಷ ನಾಲ್ವತ್ತ್ನಾಲ್ಕು ಸಾವಿರದ ನಾಲ್ಕನೂರಾ ಮೂವತ್ತೊಂದು ರೂಪಾಯಿಗಳು) ದೇಣಿಗೆ ರೂಪದಲ್ಲಿ ಪೂಜ್ಯ ಶ್ರೀಗಳಿಗೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ಇದ್ದರು. ದಾನಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.

Comments