UK Suddi
The news is by your side.

ಹುನಗುಂಡಿ ಗ್ರಾಮದಲ್ಲಿ ಬಿಜೆಪಿ ಬೂತಮಟ್ಟದ ಪ್ರಚಾರ.

ಗದಗ: ಗದಗ ಜಿಲ್ಲೆಯ ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಬಾಗಲಕೋಟ ಲೋಕಸಭಾ ಕ್ಷೇತ್ರದ ಬಿಜೆಪಿ ಬೂತಮಟ್ಟದ ಪ್ರಚಾರ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ರಾಜಶೇಖರ ಶೀಲವಂತರ ವಿಸ್ತಾರಕರಾಗಿ ಆಗಮಿಸಿದ್ದರು. ಹುನಗುಂಡಿ, ಬೆನಹಾಳ, ಅಮರಗೋಳ, ಬಿ.ಎಸ್. ಬೇಲೇರಿ, ಹೊಳೆಹಡಗಲಿ, ಕುರುವಿನಕೊಪ್ಪ, ಗಾಡಗೋಳಿ, ಹೊಳೆಮಣ್ಣೂರ, ಮೇಗೂರು, ಬೋಪಳಾಪೂರ ಗ್ರಾಮಗಳಲ್ಲಿಂದ ಆಗಮಿಸಿದ್ದ ಬೂತಮಟ್ಟದ ಅಧ್ಕಕ್ಷರು, ಕಾರ್ಯದರ್ಶಿಗಳು, ಸದಸ್ಯರಿಗೆ ರಾಜಶೇಖರ ಮಾಹಿತಿ ನೀಡಿದರು. ಚುನಾವಣೆಯಲ್ಲಿ ಮತದಾರರನ್ನು ಕರೆದುಕೊಂಡು ಬರುವುದು ಪೇಜ್ ಪ್ರಮುಖರ ಕಾರ್ಯ ಪ್ರಮುಖವಾಗಿದೆ. ಎಲ್ಲರೂ ಕೂಡಿಕೊಂಡು ಹೆಚ್ಚು ಮತದಾನ ಆಗುವಂತೆ ಮಾಡಬೇಕೆಂದು ಸಭೆಯಲ್ಲಿ ಹೇಳಿದರು. ಇದೇ ಸಂದರ್ಭದಲ್ಲಿ ಬಸವಂತಪ್ಪ ಎಚ್. ತಳವಾರ ಶಕ್ತಿ ಕೇಂದ್ರ ಪ್ರಮುಖರು ಮಾತನಾಡಿ ಹುನಗುಂಡಿ ಗ್ರಾಮದಲ್ಲಿ ಈಗಾಗಲೇ ಎರಡು ಬೂತಗಳಿದ್ದು ಈ ಬೂತಗಳಲ್ಲಿ ಯಶಸ್ವಿಯಾಗಿ ಮತದಾರರನ್ನು ಮನವೊಲಿಸುವುದು ದಿನಾಲು ಮನೆ, ಮನೆಗೆ ತೆರಳಿ ತಮ್ಮ ಪಕ್ಷಕ್ಕೆ ವೋಟು ಹಾಕಬೇಕೆಂದು ಪ್ರಚಾರ ಮಾಡಿದ್ದೇವೆ ಎಂದರು. ಶಿವಕುಮಾರ ನೀಲಗುಂದ, ರಾಮನಗೌಡ ಪಾಟೀಲ, ಅಶೋಕ ಹೆಬ್ಬಳ್ಳಿ, ಮುತ್ತಣ್ಣ ಜಂಗಣ್ಣವರ, ಹುನಗುಂಡಿ ಗ್ರಾಮದ ಹಾಗೂ ಬೆನಹಾಳ ಗ್ರಾಮದ ಹಿರಿಯರು ಸಭೆಯಲ್ಲಿದ್ದರು.
ವರದಿ: ಪ್ರಭು ಗಂಜಿಹಾಳ
ಮೊ:9448775346

Comments