UK Suddi
The news is by your side.

ಹೊಳೆಆಲೂರಲ್ಲಿ ಕಲ್ಯಾಣಿಯವರಿಗೆ ಸನ್ಮಾನ.

ರೋಣ(ಗದಗ):ತಾಲೂಕಿನ ಹೊಳೆಆಲೂರಿನ ಶ್ರೀ.ಕವಿಪ್ರ ಸಮಿತಿಯ ಕಲಾ,ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನಕೇಂದ್ರದ ವತಿಯಿಂದ ಇತ್ತೀಚೆಗೆ ಸೇವಾ ನಿವೃತ್ತರಾದ ಶ್ರೀ ಕಲ್ಮೇಶ್ವರ ಬಾಲಕರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ವಿ.ಜಿ.ಕಲ್ಯಾಣಿ ಅವರನ್ನು ಪದವಿ ಮಹಾವಿದ್ಯಾಲಯದ ವತಿಯಿಂದ ಶಾಲು ಹೊದಿಸಿ ಫಲಪುಷ್ಪಗಳೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ ವಹಿಸಿದ್ದರು. ಪ್ರೊ. ಆರ್.ಎಸ್.ಪಾಟೀಲ ಕಲ್ಯಾಣಿ ಅವರ ಸೇವೆ, ಒಡನಾಟಗಳ ಕುರಿತು ಮಾತನಾಡಿದರು.ಸನ್ಮಾನದ ನಂತರ ಮಾತನಾಡಿದ ಕಲ್ಯಣಿಯವರು ಪದವಿ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಗಳೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು. ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ ವಿಜ್ಞಾನ ಶಿಕ್ಷಕರಾಗಿ ವಿದ್ಯಾರ್ಥಿಗಳನ್ನು ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಕಲ್ಯಾಣಿಯವರು ಶ್ರಮಿಸಿದ ಕುರಿತು ಹೇಳಿದರಲ್ಲದೆ ನಿವೃತ್ತಿಯ ಜೀವನ ಸುಖಕರವಾಗಿರಲಿ ಎಂದು ಶುಭಕೋರಿದರು. ಪ್ರಾಸ್ತಾವಿಕವಾಗಿ ಡಾ.ಪ್ರಕಾಶ ಕಣವಿ ಮಾತನಾಡಿದರು. ಕೊನೆಯಲ್ಲಿ ಡಾ.ಪ್ರಭು ಗಂಜಿಹಾಳ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಎನ್.ಆರ್.ಹಿರೆಸಕ್ಕರಗೌಡ್ರ, ಪ್ರೊ.ಪಿ.ಆರ್.ಸದುಗೋಳ,ಪ್ರೊ.ಜಿ.ವಿ.ಬೀಳಗಿ, ಪ್ರೊ.ಎಂ.ಕೆ.ರೊಟ್ಟಿ, ಡಾ.ಎಂ.ಎನ್.ಕಡಪಟ್ಟಿ, ಪ್ರೊ.ಜಿ.ಪಿ.ಚಕ್ರಸಾಲಿ, ಪ್ರೊ.ಎಸ್.ವಾಯ್.ಪೂಜಾರ್, ಪ್ರೊ.ವಿ.ಪಿ.ಪಾಟೀಲ, ಎಲ್.ಬಿ.ಕಪ್ಪಲಿ, ಎಸ್.ಆರ್.ಮುಂದಿನಮನಿ ಸುಪರಿಂಟೆಂಡೆಂಟ್ ಎಂ.ವಿ.ಪಾಟೀಲ ಹಾಗೂ ಮಹಾವಿದ್ಯಾಲಯದ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ:ಪ್ರಭು ಗಂಜಿಹಾಳ
ಮೊ:9448775346

Comments