UK Suddi
The news is by your side.

ಏಕವಲಯ ಮಹಿಳೆಯರ ಟೆನಿವಾಯಿಟ್ ಪಂದ್ಯಾವಳಿ ಹುನಗುಂದ ವಿಜಯ ಮಹಾಂತೇಶ ವಸ್ತ್ರದ ಕಾಲೇಜು ಚಾಂಪಿಯನ್

ಹುನಗುಂದ(ಬಾಗಲಕೋಟ): ಜಿಲ್ಲೆಯ ಹುನಗುಂದದ ವಿಎಂಎಸ್‍ಆರ್ ವಸ್ತ್ರದ ಮಹಾವಿದ್ಯಾಲಯದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಮಹಿಳೆಯರ ಟೆನಿಕ್ವಾಯಿಟ್ ಪಂದ್ಯಾವಳಿಯಲ್ಲಿ ವಿಜಯ ಮಹಾಂತೇಶ ವಸ್ತ್ರದ ಮಹಾವಿದ್ಯಾಲಯ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿತು.

ಈ ತಂಡದಲ್ಲಿ ಜ್ಯೋತಿ ಹಳ್ಳೂರ ಅವರ ನಾಯಕತ್ವದಲ್ಲಿ ಸರೋಜಾ ಜೀರಲಬಾವಿ, ಮೇಘಾ ತಾಳಿಕೋಟಿ, ಮಹಾದೇವಿ ಜಾಲಿಹಾಳ ಸ್ಪರ್ಧಿಸಿದ್ದರು. ಇಲಕಲ್‍ದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯವು ದ್ವಿತೀಯ ಸ್ಥಾನವನ್ನು ಮುದ್ದೇಬಿಹಾಳದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ತೃತೀಯ ಸ್ಥಾನವನ್ನು ಪಡೆದುಕೊಂಡಿತು.

ಪುರುಷರ ವಿಭಾಗದಲ್ಲಿ ಇಲಕಲದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯವು ಚಾಂಪಿಯನ್ನ ಪ್ರಶಸ್ತಿ ಪಡೆದುಕೊಂಡಿತು. ವಿ.ಎಂ.ಎಸ್.ಆರ್.ವಸ್ತ್ರದ ಮಹಾವಿದ್ಯಾಲಯವು ದ್ವಿತೀಯ ಪ್ರಶಸ್ತಿಯನ್ನು ಮತ್ತು ಬಸವನ ಬಾಗೇವಾಡಿಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ತೃತೀಯ ಸ್ಥಾನವನ್ನು ಪಡೆದುಕೊಂಡಿತು.

ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಎಂ.ಎನ್.ತೆನಿಹಳ್ಳಿ ಅಧ್ಯಕ್ಷತೆ ವಹಿಸಿ ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡುತ್ತ ಇಂದಿನ ಸೋಲು ನಾಳಿನ ಗೆಲುವಿಗೆ ಸೋಪಾನವಾಗಬೇಕು ಗೆಲುವಿನ ಕಳೆಬರುವುದು ಸೋಲಿನ ಸೊಂಕು ತಗುಲಿದಾಗ ಎಂದರು. ಪ್ರಾಚಾರ್ಯರಾದ ಪ್ರೊ.ಶಶಿಕಲಾ ಮಠ ಸ್ವಾಗತಿಸಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರ ಮೂಲಕ ತಮ್ಮ ಪ್ರತಿಭೆಯನ್ನು ತೋರ್ಪಡಿಸಬೇಕು ಎಂದರು.

ವಿಮವಿವ ಸಂಘದ ನಿರ್ದೇಶಕ ವೀರಣ್ಣ ಬಳೂಟಗಿಯವರು ಆಟದಲ್ಲಿ ಭಾಗವಹಿಸುವುದರಿಂದ ಸದೃಢವಾದ ದೇಹ ಮತ್ತು ಮನಸ್ಸನ್ನು ಬೆಳೆಸಿಕೊಳ್ಳಲು ಸಾಧ್ಯವೆಂದರು.
ಕ್ರೀಡಾ ನಿರ್ದೇಶಕರ ಎಸ್.ಬಿ.ಚಳಗೇರಿಯವರು ಕ್ರೀಡೆ ಮಾನಸಿಕ ಸದೃಢತೆ ಬೆಳೆಸುವುದು, ಪ್ರತಿಯೊಬ್ಬರಲ್ಲಿ ಗದ್ದೇ ಗೆಲ್ಲುತ್ತೇನೆ ಎಂಬ ಮನಸ್ಥಿತಿ, ಆತ್ಮವಿಶ್ವಾಸ ಇರಬೇಕು ಅದನ್ನು ಶಿಕ್ಷಣದ ಜೊತೆಯಾಗಿಯೇ ಪಡೆಯಬೇಕು. ಜ್ಞಾನ ಇದ್ದವರಿಗೆ ಆತ್ಮವಿಶ್ವಾಸ, ಆತ್ಮವಿಶ್ವಾಸ ಇದ್ದವರಿಗೆ ಗುರಿಸಾಧಿಸುವ ಮಾನಸಿಕ ಸದೃಢತೆ, ಧೈರ್ಯ ತಾನಾಗಿಯೇ ಬರುವುದು ಎಂದರು. ಈ ಪಂದ್ಯಾವಳಿಯಲ್ಲಿ ಕುಮಾರಿ ಜ್ಯೋತಿ ಹಳ್ಳೂರ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉತ್ತಮ ಆಟಗಾರಳೆಂದು ಆಯ್ಕೆಯಾದರು.

ವೇದಿಕೆಯ ಮೇಲೆ ವಿಜಯ ಮಹಾಂತೇಶ ಉಚಿತ ಪ್ರಸಾದ ನಿಲಯದ ಕಾರ್ಯಾಧ್ಯಕ್ಷ ಸಂಗಣ್ಣ ಚಿನಿವಾಲರ ಮತ್ತು ಮುದ್ದೇಬಿಹಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎನ್.ಹೊಸಮನಿಯವರು, ಪ್ರೊ.ಬಿ.ಎ.ಕಂಠಿ, ಡಾ.ಎಸ್.ಆರ್.ಗೋಲಗೊಂಡ, ಪ್ರೊ.ಎಲ್.ಎನ್.ಕುಲಕರ್ಣಿ. ಉಪಸ್ಥಿತರಿದ್ದರು. ಪ್ರೊ.ಎಸ್.ಆರ್.ನಾಗಣ್ಣವರ ನಿರೂಪಿಸಿದರು.

Comments