UK Suddi
The news is by your side.

ಖೋ ಖೋ ಪಂದ್ಯಾವಳಿಯಲ್ಲಿ ಸಾಧನೆ:ಕು.ಮೇಘಾ ಹಕ್ಕಿಗೆ ಸನ್ಮಾನ.

ರಾಮದುರ್ಗ(ಬೆಳಗಾವಿ):ಇತ್ತೀಚಿಗೆ ಆದಿಚುಂಚನಗಿರಿಯಲ್ಲಿ ನ್ಯಾಶನಲ್ ಸ್ಕೂಲ ಗೇಮ್ಸ್ ಫೆಡರೇಶನ್ ಆಪ್ ಇಂಡಿಯಾ ವತಿಯಿಂದ ಜರುಗಿದ ೬೪ನೇ ರಾಷ್ಟ್ರೀಯ ಖೋ ಖೋ ಪಂದ್ಯಾವಳಿಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ದ್ವಿತಿಯ ಸ್ಥಾನ ಪಡೆದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿನಿ ಮೇಘಾ ಪರಪ್ಪ ಹಕ್ಕಿ ಹಾಗೂ ಅವರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಕರಾದ ಬಿ ಬಿ ಹಾಲೊಳ್ಳಿ ಇವರನ್ನು ಯುವ ಗೆಳೆಯರ ಬಳಗ ಕುನ್ನಾಳ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಗುರುಗಳಾದ ಎನ್ ಎಸ್ ದೊಡಮನಿ, ಎಸ್ ಎ ಕಳ್ಳಿ, ಎಪ್ ಎನ್ ಕುರಬೇಟ, ಉಮೇಶ್ವರ ಮರಗಾಲ, ಅರ್ಚನಾ ಭಟ್, ಅಶ್ವಿನಿ ಟಿ ಹಾಗೂ ಸವಿತಾ ಮಳಲಿ ಹಾಜರಿದ್ದರು.

Comments