UK Suddi
The news is by your side.

!! ಭೀಮರಾವ್ ಅಂಬೇಡ್ಕರ್ ರವರಿಗೆ ಜನ್ಮ ದಿನದ ಶುಭಾಶಯಗಳು

ಅಂದು,
ಗುಡುಗು ಸಿಡುಲುಗಳ ಆರ್ಭಟ
ಮೇಘಗಳ ತಿಕ್ಕಾಟನಭದ ತುಂಬಾ ರಂಧ್ರಗಳ ಮಾಲೆ
ಎಡೆಬಿಡದ ವರ್ಷದ ಹನಿಮಾಲೆ
ರಭಸಕ್ಕೆ
ಭೂಮಂಡಲವೇ ಕೊಚ್ವಿ ಹೋಗುವ ಅಲೆ

ಅಂದು,
ಸೃಷ್ಠಿಯೇ ನಡುಗಿರಬಹುದು
ಭುವಿಗೊಬ್ಬ ಜ್ಞಾನಿ ಕೊಟ್ಟು
ತನ್ನನ್ನೇ ಧಿಕ್ಕರಿಸುವನೆಂದು
ಪುರೋಹಿತ ಶಾಹಿಗಳ ಜನಿವಾರವ
ಮಾಸಲು ಮಾಡುವನೆಂದು
ನವಭಾರತದ ಕರ್ತೃವಾಗುವನೆಂದು

ಅಂದು,
ಶೋಷಿತರ ಮನಗಳಲ್ಲಿ
ಜೀವನದ ಭರವಸೆಯ ಚಿಗುರು
ಚಿಗುರೋ ವಸಂತಕಾಲ
ಧಮನಿತರ ಧಮನಿಗಳಲ್ಲಿ
ಸ್ವಾಭಿಮಾನದ ರಗುತವು ಚಿಮ್ಮಿ
ಆಸರೆಯ ಅಗ್ನಿ ಹೊತ್ತಿಸಿದ ಕಾಲ

ಅಂದು,
ವರ್ಣಭೇದ ನೀತಿಯ ಅಟ್ಟಹಾಸಕ್ಕೆ
ತಿಲಾಂಜಲಿಯ ಮುನ್ಸೂಚನೆ
ಪೌರೋಹಿತ್ಯದ ಮೂಢನಂಬಿಕೆಗೆ
ಸವಾಲೆಸೆದ ದಿನಗಣನೆ
ಮಾನಿನಿಯರ ಸಮಾನತೆಗೆ
ಅಡಿಗಲ್ಲು ನೆಟ್ಟ ದಿಟ್ಟಮನೆ

ಅಂದು,
ಗಗನದ ಉದ್ದಗಲಕ್ಕೂ ಹರಡಿದ
ಚಿತ್ತಾರಗಳ ಚಿತ್ರಿಕೆಗಳು
ದಿನಕರನ ನೇರ ಸ್ವಸ್ತಿವಾಚನದಿ
ಭಾರತ ಬೆಳಗಿದ ಬೆಳಗುಗಳು
ರಜನಿಯ ತಂಪಿನಲ್ಲಿ ಮಿಂದೆದ್ದು
ದಲಿತರು ತಂಪಾದ ದಿನಗಳು

ಅಂದು,
ಏಪ್ರಿಲ್ ಮಾಹೆಯ ಹದಿನಾಕು
ರಾಮ್ ಜಿ ಸಕ್ಪಾಲ್ ಭೀಮಭಾಯಿ
ಒಡಲಿಂದ ಇಳೆಗೆ ಬಂದ
ಬಲಭೀಮನೆಂಬ ಕಂದ
ಜನ್ಮವೆತ್ತಿದ ಶುಭದಿನ
ಭಾರತರತ್ನನ ಹೊತ್ತ ಧರಣಿಯು
ಪಾವನವಾದ ದಿನ
ಡಾ!! ಬಿ.ಆರ್.ಅಂಬೇಡ್ಕರ್ ಎಂಬ
ಪರ್ಯಾಯ ಸೂರ್ಯ ಉದಯಿಸಿದ ದಿನ

✍ಮಹದೇವ್ ಬಿಳುಗಲಿ.
8792338925

Comments