ಪಿಯು ಫಲಿತಾಂಶ ಪ್ರಕಟ:ಉಡುಪಿಯವರೆ ಫಸ್ಟ್, ಚಿತ್ರದುರ್ಗದವರು ಲಾಸ್ಟ್.
ಬೆಂಗಳೂರು:ನಿರೀಕ್ಷೆಯಂತೆ ಇಂದು 2018-19ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಪ್ರಥಮ ಸ್ಥಾನ ಉಡುಪಿ ಜಿಲ್ಲೆಯ ಪಾಲಾಗಿದೆ. ದ್ವಿತಿಯ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆ ಪಡೆದುಕೊಂಡಿದೆ, ಮೂರನೇ ಸ್ಥಾನವನ್ನು ಕೊಡಗು ಜಿಲ್ಲೆ ಗಳಿಸಿಕೊಂಡಿದೆ.
ಈ ವರ್ಷ 61.73 ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ 50.53 ರಷ್ಟು, ವಿಜ್ಞಾನ ವಿಭಾಗ 66.58 ಹಾಗೂ ವಾಣಿಜ್ಯ ವಿಭಾಗದಲ್ಲಿ 66.39 ರಷ್ಟು ಪಡೆದಿದ್ದಾರೆ.80 ಕಾಲೇಜುಗಳಲ್ಲಿ ನೂರಕ್ಕೆ 100 ರಷ್ಟು ಫಲಿತಾಂಶ ಪಡೆದುಕೊಂಡಿದೆ. 98 ಕಾಲೇಜುಗಳಲ್ಲಿ ಫಲಿತಾಂಶ ಸೊನ್ನೆ ಸುತ್ತಿದೆ.ಚಿತ್ರದುರ್ಗ ಕೊನೆಯ ಸ್ಥಾನ ಪಡೆದಿದೆ.