UK Suddi
The news is by your side.

ಮೋದಿಗೆ ವರ್ಷದಲ್ಲಿ ಎರಡು ಬಾರಿ ಕುರ್ತಾ ಕಳಿಸ್ತಾರಂತೆ: ಮಮತಾ ಬ್ಯಾನರ್ಜಿ

ನವದೆಹಲಿ: ಮಮತಾ ಬ್ಯಾನರ್ಜಿ ಈಗ್ಲೂ ನನಗೆ ಆಪ್ತ ಸ್ನೇಹಿತರು. ವರ್ಷದಲ್ಲಿ ಒಂದೆರಡು ಬಾರಿ ಕುರ್ತಾ ಕಳಿಸ್ತಾರೆ. ಈಗಲೂ ನನಗೆ ಅನೇಕ ಸ್ನೇಹಿತರಿದ್ದಾರೆ. ನಾವು ಈಗಲೂ ಆಗಾಗ ಭೇಟಿಯಾಗಿ ಊಟ ಮಾಡ್ತೇವೆ. ಸ್ನೇಹಿತರಿಗಾಗಿ ಅಗತ್ಯ ಇದ್ದಾಗ ಕೆಲ ಸಮಯ ಮೀಸಲಿಡುತ್ತೇನೆ. ಬಾಂಗ್ಲಾ ಪ್ರಧಾನಿ ನನಗಾಗಿ ಢಾಕಾದಿಂದ ಸಿಹಿ ಕಳಿಸ್ತಾರೆ. ಇದು ಮಮತಾ ದೀದಿಗೆ ಗೊತ್ತಾಗಿ ಅವರೂ ಸಿಹಿ ಕೇಳಿದ್ರು ಅಂತ ಪ್ರಧಾನಿ ಹೇಳಿದ್ದಾರೆ.

ನಿನ್ನಿ ನಟ ಅಕ್ಷಯಕುಮಾರ ಜತೆ ನಡೆದ ಅನೌಪಚಾರಿಕ ಚರ್ಚೆ ವೇಳೆ ಈ ಮಾತನ್ನು ಹೇಳಿದ್ದಾರೆ.

ಕೆಲಸ ಮಾಡೀಂತ ಯಾರಿಗೂ ಒತ್ತಾಯಿಸಲ್ಲ: “ನಾನು ಕೆಲಸ ಮಾಡಿಸುತ್ತೇನೆ ಎನ್ನುವುದು ಸರಿಯಲ್ಲ. ಆದರೆ ಹೆಚ್ಚು ಕೆಲಸ ಮಾಡಬೇಕು ಎನ್ನುವುದು ಸರಿಯಾಗಿದೆ. ನಾನು ಯಾರಿಗೂ ಒತ್ತಾಯ ಮಾಡುವುದಿಲ್ಲ. ಕೆಲಸದಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ನನ್ನ ಸುತ್ತಲಿನ ಪ್ರದೇಶದಲ್ಲಿ ಕೆಲಸದ ಪರಿಸರ ಬೆಳೆಯುತ್ತೆ. ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲೇ ಜೀವನ ಕಳೆದಿದ್ದೇನೆ. ಕೆಲಸದ ಸಮಯದಲ್ಲಿ ಸಂಪೂರ್ಣ ಕೆಲಸದಲ್ಲಿ ತೊಡಗಿಸಿಕೊಳ್ತೇನೆ. ಸಭೆಯ ಸಂದರ್ಭಗಳಲ್ಲಿ ಮೊಬೈಲ್ ಬಳಸುವುದಿಲ್ಲ. ಇಂತಹ ವ್ಯಕ್ತಿತ್ವವನ್ನು ನಾನು ಬೆಳೆಸಿಕೊಂಡು ಬಂದಿದ್ದೇನೆ. ಯಾವುದೇ ಮಾತು ಬೇರೆ ಬೇರೆ ಅರ್ಥ ಸೃಷ್ಟಿಸುತ್ತೆ. ಹಾಗಾಗಿ ಕೆಲವೊಮ್ಮೆ ಮಾತನಾಡಲು ಹೆದರಿಕೆ ಆಗುತ್ತೆ” ಎಂದಿದ್ದಾರೆ.

ಸಿಎಂ ಆದ್ಮೇಲೆ ಬ್ಯಾಂಕ್ ಖಾತೆ ಆಯ್ತು: “ನಾನು ಶಾಸಕ ಆಗುವ ಮೊದಲು ಬ್ಯಾಂಕ್ ಖಾತೆ ಇರಲಿಲ್ಲ. ಚಿಕ್ಕ ಬಾಲಕ ಆಗಿದ್ದ ದಿನಗಳಲ್ಲಿ ಒಂದು ಖಾತೆ ಇತ್ತು. ಶಾಲಾ ದಿನಗಳಲ್ಲಿ ಬ್ಯಾಂಕ್ನವರೇ ಬಂದು ಖಾತೆ ಮಾಡಿಸಿದ್ರು. ಕೆಲಸವೇ ಇರಲಿಲ್ಲ ಅಂದ ಮೇಲೆ ಖಾತೆಯಲ್ಲಿ ಏನಿರುತ್ತೆ? ನಾನು ಶಾಸಕ, ಸಿಎಂ ಆದಮೇಲೆ ನನ್ನ ಬ್ಯಾಂಕ್ ಖಾತೆ ಆರಂಭವಾಯ್ತು” ಅಂತ ಮೋದಿ ಹೇಳಿದ್ದಾರೆ.

Comments