UK Suddi
The news is by your side.

ಹುನಗುಂಡಿಯಲ್ಲಿ 99ರ ವೃದ್ಧೆಯಿಂದ ಮತದಾನ.

ಗದಗ : ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಬಾಗಲಕೋಟ ದಿ. 23ರಂದು ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ 99 ವಯಸ್ಸಿನ ವೃದ್ದೆಯಾದ ಬಸಲಿಂಗವ್ವ ರಾ. ದೊಡ್ಡಗೌಡರ ಇವರನ್ನು ಗಾಲಿಕುರ್ಚಿಯಲ್ಲಿ ಮಾಜಿ ಗದಗ ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಅಧ್ಯಕ್ಷ ಬಸವಂತಪ್ಪ ಎಚ್. ತಳವಾರ ಮತದಾನ ಕೇಂದ್ರಕ್ಕೆ ಕರೆದುಕೊಂಡು ಬಂದು ಮತವನ್ನು ಚಲಾಯಿಸಲು ಸಹಾಯ ಮಾಡಿದರು.
ಇದೇ ಗ್ರಾಮದ ಅಂಗವಿಕಲರು, ವೃದ್ದರು, ಎಲ್ಲರನ್ನು ಮನೆ ಮನೆಗೆ ತೆರಳಿ ಮತದಾನಕ್ಕೆ ಸಹಕರಿಸಿ ಮತದಾನ ಉತ್ಸವದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು.
ವರದಿ: ಪ್ರಭು ಗಂಜಿಹಾಳ
ಮೊ: 9448775346

Comments