UK Suddi
The news is by your side.

RCB ಪಂದ್ಯದ ವೇಳೆ ಕಾಣೆಯಾದ ಬಾಲ್, ಎಲ್ಲಿತ್ತು ಗೊತ್ತಾ..!

ಬೆಂಗಳೂರು: ಮೊನ್ನೆ ನಡೆದ ಆರ್.ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಐಪಿಎಲ್ ಪಂದ್ಯದಲ್ಲಿ ಹಾಸ್ಯ ಪ್ರಸಂಗವೊಂದು ನಡೆದಿದೆ.

ಆರ್ ಸಿಬಿ ಬ್ಯಾಟಿಂಗ್ ನಡೆಸುವ ವೇಳೆ ಚೆಂಡು ಕಾಣೆಯಾಗಿ ಒಂದು ನಿಮಿಷಕ್ಕೂ ಹೆಚ್ಚು ಕಾಲ ಪಂದ್ಯ ಸ್ಥಗಿತಗೊಂಡಿತ್ತು. 14ನೇ ಓವರ್ ಬೌಲ್ ಮಾಡಲು ಬಂದ ಅಂಕಿತ್ ರಜಪೂತ್ ಬಾಲ್ ಕೇಳಿದಾಗ ಅಂಪೈರ್ ಗಲಿಬಿಲಿಗೊಂಡರು, ಪಂಜಾಬ್ ನಾಯಕ ರವಿಚಂದ್ರನ್ ಅಶ್ವಿನ್ ಸಹ ಎಷ್ಟು ಹುಡುಕಾಡಿದರೂ ಸಿಗಲೇ ಇಲ್ಲ. ಕನ್ ಫ್ಯೂಸ್ ಆದ ಅಶ್ವಿನ್ ಅಂಪಾಯರ್ ಬಳಿ ಕೇಳಿದಾಗ ಅವರಿಗೂ ನೆನಪಾಗಲಿಲ್ಲ.

ಕೊನೆಗೆ ಲೆಗ್ ಅಂಪಾಯರ್ ಗೂ ತಿಳಿಯದಾದಾಗ ಫೋರ್ತ್ ಅಂಪಾಯರ್ ಹೊಸ ಬಾಲ್ ತಂದು ಕೊಟ್ಟರು. ಇನ್ನೇನು ಹೊಸ ಬಾಲ್ ಬಳಸಬೇಕೆನ್ನುವಷ್ಟರಲ್ಲಿ ರಿಪ್ಲೇನಲ್ಲಿ ಅಂಪಾಯರ್ ಜೇಬಿನಲ್ಲಿ ಬಾಲ್ ಇಟ್ಟಿದ್ದು ಗೊತ್ತಾಗಿದೆ.

ವಿರಾಮದ ಹೊತ್ತಿಗೆ ಸ್ವತಃ ಅಂಪೈರ್ ತಮ್ಮ ಪ್ಯಾಂಟ್ ಜೇಬಿನೊಳಗೆ ಬಾಲ್ ಇಟ್ಟುಕೊಳ್ಳುತ್ತಾರೆ. ಆದರೆ ಈ ವಿಚಾರವನ್ನು ಮರೆತು ಬಾಲ್‌ಗಾಗಿ ಹುಡುಕಾಡುತ್ತಾರೆ. ಪ್ರಸ್ತುತ ಘಟನೆಯು ಇತ್ತಂಡಗಳ ಆಟಗಾರರ ನಡುವೆ ತಮಾಷೆಯ ವಾತಾವರಣವನ್ನು ಸೃಷ್ಟಿ ಮಾಡಿತು.

Comments