UK Suddi
The news is by your side.

ವಾರಣಾಸಿಯಲ್ಲಿ ನರೇಂದ್ರ ಮೋದಿ ಮೆಗಾ ರೋಡ್ ಶೋ..!

ವಾರಾಣಸಿ: ಲೋಕಸಭೆ ಚುನಾವಣೆಗಾಗಿ ನಾಳೆ ನಾಮಪತ್ರ ಸಲ್ಲಿಸಲಿರುವ ಪ್ರಧಾನಿ ಮೋದಿ ವಾರಾಣಸಿಯಲ್ಲಿ ಬೃಹತ್ ರೊಡ್ ಶೋ ನಡೆಸಿದರು.

ಉತ್ತರ ಪ್ರದೇಶ ವಾರಾಣಸಿಯಿಂದ ಲೋಕಸಭೆಗೆ ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಲಿರುವ ಪ್ರಧಾನಿ ಮೋದಿಗೆ ಸ್ಥಳೀಯರಿಂದ ಭವ್ಯ ಸ್ವಾಗತ ದೊರಕಿದೆ.

ಮದನ ಮೋಹನ ಮಾಲ್ವಿಯಾ ಪುತ್ಥಳಿಗೆ ನಮನ ಸಲ್ಲಿಸಿದ ಬಳಿಕ ರೋಡ್ ಶೋ ನಡೆಸಿದ ಪ್ರಧಾನಿ ಮೋದಿಗೆ ಹೂವಿನ್ ಸುರಿಮಳೆ ಮೂಲಕ ಸ್ವಾಗತ ಮಾಡಲಾಯಿತು.

ಇಂದು ನಾಮಪತ್ರ ಸಲ್ಲಿಕೆ:

ಇಂದು ನರೇಂದ್ರ ಮೋದಿ ನಾಮಪತ್ರ ಸಲ್ಲಿಸಲಿದ್ದು, ಎನ್ಡಿಎ ನಾಯಕರು ಭಾಗಿ ಆಗುವ ಸಾಧ್ಯತೆ ಇದೆ. ಬಿಹಾರ ಸಿಎಂ ನಿತೀಶ್ ಕುಮಾರ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕರೆ, ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಸೇರಿ ಹಲವರು ಭಾಗಿಯಾಗಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಕಾಲ ಭೈರವ ದೇಗುಲದಲ್ಲಿ ಮೋದಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

Comments