UK Suddi
The news is by your side.

ರಾತ್ರಿ ಮದುವೆ ಮೆರವಣಿಗೆ ವೇಳೆ ಇಬ್ಬರು ಯುವಕರ ಮೇಲೆ  ಹಲ್ಲೆ.

ಬೆಳಗಾವಿ: ತಡರಾತ್ರಿ ಕಣಬರಗಿ ಗ್ರಾಮದ ಹದ್ದಿಯಲ್ಲಿ ಇಬ್ಬರು ಯುವಕರ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿದೆ.

ಕಣಬರಗಿಯ ಹದ್ದಿಯಲ್ಲಿ ಮದುವೆಯೊಂದರ‌ ಮೆರವಣಿಗೆ ಸಾಗುತ್ತಿದ್ದ ವೇಳೆ ಕಿಡಿಗೇಡಿಗಳಿಬ್ಬರೂ ಚಾಕುವಿನಿಂದ ದಾಳಿ ನಡೆಸಿದ್ದರಿಂದ ಪರಶುರಾಮ ಮಾರುತಿ ಶೀಗಿಹಳ್ಳಿ(24) ಎಂಬುವವನಿಗೆ ಗಾಯವಾಗಿದ್ದು, ಸಹಾಯಕ್ಕೆ ಬಂದ ಆತನ ಸಹೋದರ ಸಂಬಂಧಿ ಅಮಿತ ಸುರೇಶ ಶೀಗಿಹಳ್ಳಿ(21) ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿದ ವರದಿಯಾಗಿದೆ. ಹಳೆಯ ಜಗಳವೊಂದರ ದ್ವೇಷವಿಟ್ಟು ಹಲ್ಲೆ ನಡೆಸಿದರು ಎಂದು ಗಾಯಾಳುಗಳ ಸಿಬ್ಬಂಧಿ ಶಂಕೆ ವ್ಯಕ್ತಪಡಿಸಿದ್ದಾರೆ.

ಹಲ್ಲೆಕೋರರು ಎಂದು ಗುರುತಿಸಲಾಗುತ್ತಿರುವ ಲಗಮನ್ನ ಮತ್ತು ಚಂದ್ರು ಎಂಬುವವರ ಶೋಧ ಪೊಲೀಸರು ನಡೆಸಿದ್ದಾರೆ. ತಡರಾತ್ರಿ ಮಾಳಮಾರುತಿ ಪೊಲೀಸರು ಪರಿಶೀಲನೆ ನಡೆಸಿದರು. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Comments