UK Suddi
The news is by your side.

ಗಾಳಿ ಮಳೆಗೆ ಉರುಳುವ ಗಿಡಗಳಿಂದ ಆಗುತ್ತಿರುವ ಹಾನಿಗೆ ಅರಣ್ಯ ಇಲಾಖೆ ಹೊಣೆಯಾಗಲಿ.

ಬೆಳಗಾವಿ: ವಿಪರೀತ ಗಾಳಿ ಮಳೆಗೆ ಉರುಳಿದ ಗಿಡಮರಗಳಿಂದ ಆಗುತ್ತಿರುವ ಸಾರ್ವಜನಿಕ ಹಾನಿ ತಪ್ಪಿಸಲು ಜಿಲ್ಲಾಡಳಿತ ಮುಂದಾಗಬೇಕೆಂದು ಕನ್ನಡ ಕ್ರಿಯಾ ಸಮಿತಿ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದೆ.

ಇಂದು ಡಿಸಿ ಕಚೇರಿ ಎದುರು ಅಶೋಕ ಚಂದರಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಅರಣ್ಯ, ಪಾಲಿಕೆ ಹಾಗೂ ಲೋಕೋಪಯೋಗಿ, ಹೆಸ್ಕಾಂ ಇಲಾಖೆಗಳ ಸಮನ್ವಯ ಸಮಿತಿ ರಚಿಸಿ ಸಿಂಗಲ್ ವಿಂಡೊ ತೆರೆಯುವಂತೆ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ ಅವರನ್ನು ಆಗ್ರಹಿಸಿದ್ದಾರೆ. ನಗರದಲ್ಲಿ ಭಾರಿ ಗಾಳಿ-ಮಳೆಗೆ ಸಾಕಷ್ಟು ಗಿಡಗಳು ಬಿದ್ದು, ಲೈಟ್ ಕಂಬಗಳು ಧರೆಗುರುಳಿವೆ. ಸಾಕಷ್ಟು ವಾಹನಗಳು ಜಖಂಗೊಂಡಿವೆ ಎಂದು ಡಿಸಿ ಎದುರು ಆತಂಕ ವ್ಯಕ್ತಪಡಿಸಿದರು.

ಅಪಾಯಕಾರಿ ಗಿಡಮರಗಳನ್ನು ತೆಗೆಯುವಂತೆ, ಟ್ರಿಮ್ಮಿಂಗ್ ಮಾಡುವಂತೆ ಸಾರ್ವಜನಿಕರು ಅರ್ಜಿ ಸಲ್ಲಿಸಿದರೂ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಸಂಬಂಧಿಸಿದ ಇಲಾಖೆಗಳ ನಡುವೆ ಸಮನ್ವಯ ಕೊರತೆ ಕಾಣುತ್ತಿದೆ. ಜಿಲ್ಲಾಡಳಿತ ಸಮ್ಬಯ ಸಮಿತಿ ರಚಿಸಿ ಸಾರ್ವಜನಿಕರ ಸಹಾಯಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಎಂ. ಜಿ. ಮಕಾನದಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Comments