UK Suddi
The news is by your side.

ಬ್ರೆಕಿಂಗ್ ನ್ಯೂಸ್: ಬೆಂಗಳೂರಿಗೆ ಆಗಮಿಸುವ ಮಹಿಳೆಯರಿಗೆ ಹಾಸ್ಟೆಲ್ ವ್ಯವಸ್ಥೆ, ಸರ್ಕಾರದಿಂದ ಹೊರಬಿತ್ತು ನೂತನ ಯೋಜನೆ.

ಬೆಳಗಾವಿ: ರಾಜಧಾನಿ ಬೆಂಗಳೂರು ಮಹಾನಗರಕ್ಕೆ ರಾಜ್ಯ ವಿವಿಧ ಜಿಲ್ಲೆಗಳಿಂದ ಆಗಮಿಸುವ ಮಹಿಳೆಯರಿಗೆ ಸೂಕ್ತ ಸುರಕ್ಷತೆ ಒದಗಿಸುವ ಹಿತದೃಷ್ಟಿಯಿಂದ ರಾಜ್ಯ ಸಮ್ಮಿಶ್ರ ಸರಕಾರ ಮೂರು ದಿನಗಳ ವರೆಗೆ ವಸತಿ ಭಾಗ್ಯ ಕಲ್ಪಿಸುವ ಮಹತ್ವಾಕಾಂಕ್ಷೆ ನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ.

ಸಂದರ್ಶನ, ಪರೀಕ್ಷೆ ಹಾಗೂ ವಿವಿಧ ಸರಕಾರಿ ಕಚೇರಿಗಳ ಕಾರ್ಯ ನಿಮಿತ್ಯ ಬೆಂಗಳೂರು ಮಹಾನಗರಕ್ಕೆ ಆಗಮಿಸುವ ಮಹಿಳೆಯರಿಗೆ ವಿಶೇಷವಾಗಿ ಒಂಟಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸುವ ಹಿತದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಗರದ 13 ವಿವಿಧ ಕಡೆಗಳಲ್ಲಿನ ಮಹಿಳೆಯರಿಗಾಗಿ ಮಿಸಲಿರುವ ಟ್ರಾನ್ಸಿಟ್ ಹಾಸ್ಟೆಲ್ ಗಳಲ್ಲಿ ಮೂರು ದಿನಗಳ ಸೂಕ್ತ ವಸತಿ ಕಲ್ಪಿಸುವ ಕಾರ್ಯಕ್ಕೆ ಮುಂದಾಗಿದೆ.

ಈ ವಿನೂತನ ಹಾಗೂ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ವಾಸ್ತವ್ಯದ ಜೊತೆಗೆ ತಿಂಡಿ, ಊಟ ಹಾಗೂ ಉಪಚಾರದ ವ್ಯವಸ್ಥೆ ಕಲ್ಪಿಸಿದೆ. ಸೌಲಭ್ಯವು ಎಲ್ಲಾ ವರ್ಗದ ಮಹಿಳೆಯರಿಗೆ ಹಾಗೂ ಯಾವುದೇ ವರಮಾನದ ಮಿತಿ ನಿಗದಿಗೊಳಿಸದಿರುವುದು ವಿಶೇಷ.

Comments