UK Suddi
The news is by your side.

ಜಿಲ್ಲಾಧಿಕಾರಿಗಳ ಭೇಟಿ ಮಾಡಿದ ಸೈನಿಕ ಕಲ್ಯಾಣ ಇಲಾಖೆಯ ನಿರ್ದೆಶಕರು.

ಧಾರವಾಡ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೆಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಸೋಮವಾರ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಭೇಟಿ ಮಾಡಿ ಸೈನಿಕರ ಕಲ್ಯಾಣ ಚಟುವಟಿಕೆಗಳ ಕುರಿತು ಚರ್ಚಿಸಿದರು.

ನಂತರ ಸೈನಿಕ ವಿಶ್ರಾಂತಿ ಗೃಹದಲ್ಲಿ ಸಭೆ ನಡೆಸಿ ಮಾಜಿ ಸೈನಿಕರ ಕುಂದುಕೊರತೆಗಳನ್ನು ಆಲಿಸಿದರು, ಇಲಾಖೆಯ ಉಪನಿರ್ದೆಶಕ ವಿಂಗ್ ಕಮಾಂಡರ್ ಈಶ್ವರ ಕೋಡೊಳ್ಳಿ, ಜಿಲ್ಲಾ ಸೈನಿಕ ಮಂಡಳಿಯ ಉಪಾಧ್ಯಕ್ಷ ಸಿ.ಎಸ್. ಹವಾಲ್ದಾರ ಸೇರಿದಂತೆ ನಿವೃತ್ತ ಸೇನಾಧಿಕಾರಿಗಳು, ಯುದ್ಧ ಸಂತ್ರಸ್ತರು, ಮಾಜಿ ಸೈನಿಕರು ಉಪಸ್ಥಿತರಿದ್ದರು.

Comments